Saturday, August 13, 2022

Latest Posts

ಈ ರೀತಿಯಾಗಿ ಗೊಜ್ಜು ಮಾಡಿರೋಕೆ ಸಾಧ್ಯನೇ ಇಲ್ಲ: ಸ್ವೀಟ್ & ಸ್ಪೈಸಿ ರೆಸಿಪಿ

ಯಾವಾಗಲೂ ಮಾಮೂಲಿ ಚಟ್ನಿ, ಪಲ್ಯ ತಿಂದು ರುಚಿ ಹಾಳಾಗಿದ್ದರೆ ಈ ಟೇಸ್ಟಿ ಕ್ಯಾಪ್ಸಿಕಂ ಗೊಜ್ಜು ಮಾಡಿ

ಬೇಕಾಗಿರುವ ಪದಾರ್ಥಗಳು:

ಟೊಮಾಟೋ
ಈರುಳ್ಳಿ
ಕ್ಯಾಪ್ಸಿಕಂ
ಸಾಸಿವೆ
ಎಣ್ಣೆ
ಉದ್ದಿನಬೇಳೆ
ಕಡಲೆಬೇಳೆ
ಮೆಣಸಿನಪುಡಿ(ಮೆಂತ್ಯ ಮಿಶ್ರಿತ)
ಹುಣಸೆರಸ
ಬೆಲ್ಲ
ಉಪ್ಪು
ಕೊತ್ತಂಬರಿ

ಮಾಡುವ ವಿಧಾನ:

  • ಮೊದಲಿಗೆ ಒಂದು ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಫ್ರೈ ಮಾಡಿ.
  • ನಂತರ ಅದಕ್ಕೆ ಕ್ಯಾಪ್ಸಿಕಂ, ಈರುಳ್ಳಿ, ಟೊಮಾಟೋ ಹಾಕಿ ಬೇಯುವವರೆಗೆ ಫ್ರೈ ಮಾಡಿ.
  • ತರಕಾರಿ ಬೆಂದ ನಂತರ ಅದಕ್ಕೆ ಹುಣಸೆ ರಸ ಬೆರಸಿಕೊಳ್ಳಿ ಸ್ವಲ್ಪ ಕುದ್ದ ನಂತರ ಅದಕ್ಕೆ ಉಪ್ಪು, ಬೆಲ್ಲ ಹಾಗೂ ಮೆಣಸಿನಪುಡಿ ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ.
  • ಕೊನೆಯಲ್ಲಿ ಅದಕ್ಕೆ ಕೊತ್ತಂಬರಿ ಹಾಕಿ. ಗೊಜ್ಜು ದಪ್ಪ ಹದಕ್ಕೆ ಬರಬೇಕೆಂದರೆ ಅದಕ್ಕೆ ಅಕ್ಕಿ ಹಿಟ್ಟಿನಲ್ಲಿ ನೀರು ಬೆರಸಿ ಹಾಕಿ ಕುದಿಸಿದರೆ ಆಯ್ತು.. ಟೇಸ್ಟಿ ಕ್ಯಾಪ್ಸಿಕಂ ಗೊಜ್ಜು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss