ಲಾಕ್ಡೌನ್ ಬೇರೆ ಘೋಷಣೆಯಾಗಿದೆ. ಶಾಲೆಗೆ ಹೋಗಿ ಬಂದ ಸಮಯದಿಂದ ಮಲಗುವವರೆಗೆ ಮಕ್ಕಳನ್ನು ಹಿಡಿಯೋದು ಕಷ್ಟವಾಗಿತ್ತು. ಇದೀಗ ಲಾಕ್ಡೌನ್ನಿಂದ ಇಡೀ ದಿನ ಮಕ್ಕಳನ್ನು ನೋಡುವುದೇ ಕೆಲಸ ಅವರೇನು ಮಾಡ್ತಾರೆ? ಏನಾದರೂ ತಿಂದುಬಿಟ್ಟರೆ, ಅಥವಾ ಮುಟ್ಟಿಬಿಟ್ಟರೆ ಅನ್ನೋದೆ ಚಿಂತೆ.. ಅಮ್ಮಂದಿರ ಚಿಂತೆಗೆ ನಾವು ಬ್ರೇಕ್ ಹಾಕ್ತೇವೆ.. ಮಕ್ಕಳ ಟೈಮ್ ಪಾಸ್ಗೆ ಹೀಗೆ ಮಾಡಿ..
ಪೇಂಟ್ ಮಾಡೋದು ಕಲಿಸಿ, ಪುಸ್ತಕದಲ್ಲಿ ಡ್ರಾ ಮಾಡೋದು ಜೊತೆಗೆ ಬಣ್ಣ ಹಚ್ಚುವುದನ್ನು ಕಲಿಸಿ. ಇದು ಸ್ವಲ್ಪ ಸಮಯ ಅವರನ್ನು ಹಿಡಿದಿಟ್ಟುಕೊಳ್ಳುತ್ತದೆ.
ಇಂಡೋರ್ ಗೇಮ್ಸ್, ನಿಮ್ಮ ಮನೆಯ ಮುಂದೆ ಜಾಗ ಇಲ್ಲದಿದ್ದರೆ ಇಂಡೋರ್ ಗೇಮ್ಸ್ ಬಗ್ಗೆ ಗಮನಹರಿಸಿ, ಕೇರಂ, ಚೆಸ್ ಆಡಲು ಹೇಳಿಕೊಡಿ.
ಮನೆಯಲ್ಲಿ ಎಲ್ಲರೂ ಫ್ರೀ ಇದ್ದ ವೇಳೆ ಕಣ್ಣಾಮುಚ್ಚಾಲೆ ಆಡಿ. ಮಕ್ಕಳು ಅಡಗುವ ತಾಣದ ಬಗ್ಗೆ ಗಮನ ಇರಲಿ.
ಮಕ್ಕಳನ್ನು ಅಡುಗೆ ಮಾಡುವಾಗ ಹೆಲ್ಪ್ ಮಾಡಲು ಸೇರಿಸಿಕೊಳ್ಳಿ. ಅವರಿಗೆ ಏನೂ ಹಾರ್ಮ್ ಆಗದಂತ ಕೆಲಸ ಕೊಡಿ.
ಮನೆಯಲ್ಲಿಯೇ ಟ್ರೆಶರ್ ಹಂಟ್ ಆಟ ಆಡಿ. ಇದರಿಂದ ಅವರ ಬುದ್ಧಿ ಚುರುಕಾಗುತ್ತದೆ.
ದಿನವೂ ಒಂದೊಂದು ಹಾಡು ಹೇಳಿಕೊಡಿ. ಅವರಿಗೆ ಸಂಗೀತಾಸಕ್ತಿ ಬೆಳೆಸಿ.
ಯೋಗ ಧ್ಯಾನ ವ್ಯಾಯಾಮ ಅಥವಾ ಆಟ ಯಾವುದಾದರೂ ಒಂದನ್ನಾದರೂ ಅವರು ಮಾಡಲಿ ಬಿಡಿ.
ಯಾರದ್ದಾದರೂ ಜನ್ಮದಿನ ಇದ್ದರೆ ಅವರ ಕೈಯಲ್ಲೇ ಕಾರ್ಡ್ ಮಾಡಿಸಿ,ಕ್ರಾಫ್ಟ್ ಮಾಡೋದು ಮಕ್ಕಳಿಗೆ ಇಷ್ಟದ ಕೆಲಸ
ಮನೆ ಎದುರಿಗೆ ಜಾಗ ಇದ್ದರೆ ಶೆಟಲ್ ಆಟ ಆಡಿ. ಅವರಿಗೂ ಹೇಳಿಕೊಡಿ.
ಮೊಬೈಲ್ನಲ್ಲಿ ರೈಮ್ಸ್ ಹಾಕಿದರೆ ಅಥವಾ ಗೇಮ್ಸ್ ಹಾಕಿಕೊಟ್ಟರೆ ನಿಮ್ಮ ಕೆಲಸ ಮುಗಿಯುವುದಿಲ್ಲ. ಇದೇ ಅತಿ ಆದರೆ ಅವರ ಕಣ್ಣಿಗೆ ತೊಂದರೆ.