ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೆಳಗ್ಗೆ ಬೇಗ ಏಳುವುದಕ್ಕೆ ಕಷ್ಟವಾಗ್ತಿದ್ಯಾ? ಹಾಗಿದ್ರೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ..

ಬಹುಪಾಲು ಎಲ್ಲರೂ ಹಾಗೆಯೇ… ರಾತ್ರಿ ಎಷ್ಟು ಹೊತ್ತು ಬೇಕಾದರೂ ಎಚ್ಚರವಿರುತ್ತಾರೆ. ಆದರೆ ಬೆಳಗ್ಗೆ ಬೇಗ ಏಳಲು ಆಗುವುದಿಲ್ಲ. ಬೇಗ ಏಳಲು ಅಲರಾಮ್ ಇಟ್ಟುಕೊಂಡಿರುತ್ತಾರೆ. ಆದರೆ, ನಿದ್ದೆಗಣ್ಣಲ್ಲೇ ಅಲಾರಾಮ್ ಆಫ್ ಮಾಡಿ ಮುಸುಕು ಹೊದ್ದು ಮಲಗುತ್ತಾರೆ. ನಿಮಗೆ ಬೇಗ ಎದ್ದೇಳಬೇಕೆಂಬ ಹಂಬಲವಿದ್ದು, ಆದರೆ ಬೇಗ ಏಳಲು ಆಗುತ್ತಿಲ್ಲವೇ? ಹಾಗಿದ್ರೆ ಈ ಸಿಂಪಲ್ ಟಿಪ್ ಟ್ರೈ ಮಾಡಿ..

  • ರಾತ್ರಿ ಹೊತ್ತು ಹೆಚ್ಚು ಹೊತ್ತು ಎಚ್ಚರವಿರುವವರಲ್ಲಿ ಶೇ.40ರಷ್ಟು ನಿದ್ರಾಹೀನತೆ ಸಮಸ್ಯೆ ಇರುತ್ತದೆ. ಆದಷ್ಟು ಬೇಗ ರಾತ್ರಿ ನಿದ್ದೆ ಮಾಡಿ.
  • ಬೆಳಗ್ಗೆ ಎಷ್ಟು ಗಂಟೆಗೆ ಏಳಬೇಕೆಂಬುದನ್ನು ರಾತ್ರಿ ನಿರ್ಧರಿಸಿ, ನಿಮ್ಮ ಮನಸ್ಸಿಗೆ ಅದನ್ನು ಮನವರಿಕೆ ಮಾಡಿ.
  • ಅಲರಾಮ್ ಇಟ್ಟುಕೊಳ್ಳಬೇಡಿ. ಅಲಾರಾಮ್ ಇಲ್ಲದೇಯೇ ನಾನು ಎದ್ದೇಳಬೇಕೆಂದುಕೊಂಡು ಮಲಗಿ. ಅದೇ ಸಮಯಕ್ಕೆ ಬೆಳಗ್ಗೆ ನಿಮಗೆ ಎಚ್ಚರವಾಗುತ್ತದೆ.
  • ಬೆಳಗ್ಗೆ ಎದಕ್ಕ ತಕ್ಷಣ ಮೊಬೈಲ್ ನೋಡಬೇಡಿ. ಹಾಸಿಗೆಯಲ್ಲೇ ಕುಳಿತು ಕಣ್ಮುಚ್ಚಿ, ನಿಮ್ಮ ಇಷ್ಟ ದೇವರನ್ನು ನೆನಪಿಸಿಕೊಳ್ಳಿ.
  • ಎದ್ದ 15 ನಿಮಿಷ ನಿಮ್ಮಿಷ್ಟದ ಚಟುವಟಿಕೆ ಮಾಡಿ. ಇದು ಮನಸ್ಸಿಗೆ ಬಹಳ ಖುಷಿಕೊಡುತ್ತದೆ.
  • ರಾತ್ರಿ ಮಲಗುವ ಮೊದಲೇ ಮರುದಿನದ ಶೆಡ್ಯುಲ್‌ಗಳೇನೇನು ಎಂಬುದನ್ನು ನೋಟ್ಸ್ ಮಾಡಿಕೊಳ್ಳಿ. ಅಲ್ಲಿ ಎಷ್ಟು ಗಂಟೆಗೆ ಎದ್ದೇಳಬೇಕೆಂಬುದನ್ನೂ ಕೂಡ ಬರೆದುಕೊಳ್ಳಿ.
  • ಶೆಡ್ಯುಲ್ ಅನುಸಾರ ಪ್ರತಿಯೊಂದು ಕೆಲಸಕ್ಕೂ ಸಮಯ ಸೆಟ್ ಮಾಡಿಕೊಳ್ಳಿ. ಅದೇ ಸಮಯಕ್ಕೆ ಕೆಲಸ ಮುಗಿಸುವ ಪ್ರಯತ್ನ ಮಾಡಿ.
  • ನೆರೆಹೊರಯವರೊಂದಿಗೆ ಬೆಳಗ್ಗೆ ವಾಕಿಂಗ್ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಿ.
  • ಬೆಳಗ್ಗೆ ನೀವು ಈ ಕೆಲಸ ಮಾಡಲೇ ಬೇಕು ಎಂಬಂತಹ ಯಾವುದಾದರೂ ಕೆಲಸವನ್ನು ಪ್ರಾರಂಭಿಸಿ. ಆ ಕೆಲಸ ಮಾಡುವುದಕ್ಕಾದರೂ ಬೆಳಗ್ಗೆ ಬೇಗ ಏಳಬೇಕಾಗುತ್ತದೆ.
  • ಬೆಳಗ್ಗೆ ಬೇಗ ಮಾಡುವಂತಹ ಧ್ಯಾನ, ಯೋಗ ರೂಢಿಸಿಕೊಳ್ಳಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss