spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಂಪ್ಯೂಟರ್ ಮುಂದೆ ಕುಳಿತು ಕಣ್ಣು ನೋವು ಬಂದಿದ್ಯಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ

- Advertisement -Nitte

ಹೆಚ್ಚು ಕಾಲ ಕಂಪ್ಯೂಟರ್ ನೋಡುವುದರಿಂದ ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ಇದರಿಂದ ಕಣ್ಣಿನ ನೋವು, ಕಣ್ಣಿನಲ್ಲಿ ನೀರು ಬರುವುದು, ತಲೆ ನೋವಿನಂತಹ ಅನೇಕ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಕಣ್ಣಿನ ಮೇಲಿನ ಒತ್ತಡ ನಿಯಂತ್ರಿಸಲು ಈ ಟಿಪ್ಸ್ ಟ್ರೈ ಮಾಡಿ

ಬೆಳಕು:
ನೀವು ನೋಡುವ ಮೊಬೈಲ್, ಕಂಪ್ಯೂಟರ್, ಟಿವಿ ಹೆಚ್ಚು ಹೊತ್ತು ನೋಡುವಾಗ ಅದರ ಬೆಳಕಿನ ಮೇಲೆ ಹೆಚ್ಚು ಗಮನವಿರಿಸಿ, ನಿಮ್ಮ ಕಣ್ಣಿಗೆ ನೇರ ಬೆಳಕು ಒತ್ತಡ ತರಲಿದೆ.

ಬ್ರೇಕ್ ಪಡೆಯಿರಿ:
ಕೆಲಸ ಮಾಡುವಾಗ ನಿರಂತರವಾಗಿ 8-10 ಗಂಟೆಗಳ ಕಾಲ ಕಂಪ್ಯೂಟರ್ ಎದುರು ಕುಳಿತುಕೊಳ್ಳಬೇಡಿ. ಬದಲಿಗೆ 30 ನಿಮಿಷಗಳಿಗೊಮ್ಮೆ 5-10 ನಿಮಿಷಗಳ ಬ್ರೇಕ್ ತೆಗೆದುಕೊಳ್ಳೋದು ಉತ್ತಮ.

ಕಣ್ಣು ಮಿಟುಕಿಸಿ:
ಆಗಾಗ ನಿಮ್ಮ ಕಣ್ಣುಗಳನ್ನು ಮಿಟುಕಿಸುವುದರಿಂದ ಡ್ರೈ ಆಗಿರುವ ಕಣ್ಣಿನಲ್ಲಿ ನೀರು ಉತ್ಪತ್ತಿಯಾಗಲಿದೆ. ಇದು ಕಣ್ಣಿನ ಆರೋಗ್ಯ ಕಾಪಾಡುತ್ತದೆ.

ಸ್ಪೆಕ್ಸ್:
ನಿಮ್ಮ ಕೆಲಸಕ್ಕೆ ಹಾಗೂ ನಿಮ್ಮ ಕಣ್ಣಿನ ಆರೋಗ್ಯಕ್ಕೆ ಅನುಸಾರ ವೈದ್ಯರ ಸಲಹೆ ಮೇರೆಗೆ ಸ್ಪೆಕ್ಸ್ ಖರೀದಿ ಮಾಡಿ.

ವ್ಯಾಯಾಮ:
ಕಣ್ಣಿನ ಆರೋಗ್ಯ ಕಾಪಾಡಲು ನಿಮ್ಮ ಕಣ್ಣಿಗೆ ಕೆಲವು ವ್ಯಾಯಾಮ ಮಾಡಿ. ಇದರಿಂದ ರಕ್ತ ಸಂಚಲನ ಹೆಚ್ಚಾಗಿ, ಒತ್ತಡ ಕಡಿಮೆಯಾಗುತ್ತದೆ.

ತಣ್ಣೀರು:
ನಿಮ್ಮ ಕಣ್ಣಿನ ಒತ್ತಡ ನಿವಾರಿಸಲು ದಿನಕ್ಕೆ 2 ಭಾರಿಯಾದರೂ ಕಣ್ಣನ್ನು ತಣ್ಣೀರಿನಿಂದ ತೊಳೆಯಿರಿ. ಇಲ್ಲವಾದರೆ ಕಣ್ಣಿನ ಮೇಲೆ ಒದ್ದೆ ಕಾಟನ್ ಕೂಡ ಇರಿಸಬಹುದು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss