ಒಂದೇ ದಿನದಲ್ಲಿ ಲಕ ಲಕ ಹೊಳೆಯುವ ಮುಖ ನಿಮ್ಮದಾಗಬೇಕಾ?? ಇದನ್ನ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂತಿಯುತ ಚರ್ಮಕ್ಕಾಗಿ ಎಲ್ಲರೂ ಹರಸಾಹಸ ಪಡುತ್ತಾರೆ. ಮಾರ್ಕೆಟ್‌ನಲ್ಲಿ ಸಿಗುವ ಎಲ್ಲಾ ಕ್ರೀಂ, ಪೌಡರ್‌ ಸೌಂದರ್ಯವರ್ಧಕಗಳೆನ್ನೆಲ್ಲಾ ಬಳಸುತ್ತಾರೆ. ಅದರಲ್ಲೂ ಮಹಿಳೆಯರು ಸುಂದರ ತ್ವಚೆಗಾಗಿ ಮಾಡದ ಪ್ರಯೋಗವೇ ಇಲ್ಲ. ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳಿಗಿಂತ ನೈಸರ್ಗಿಕ ಉತ್ಪನ್ನಗಳಿಂದ ಚರ್ಮವನ್ನು ಹೊಳೆಯುವಂತೆ ಮಾಡುವುದು ಸುಲಭ. ಏನ್‌ ಅಂತೀರಾ?

ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದರಲ್ಲಿ ಒಂದು ಲೋಟ ನೀರು ಸುರಿಯಿರಿ. ನೀರು ಬಿಸಿಯಾದ ನಂತರ, ಎರಡು ಚಮಚ ಅಗಸೆ ಬೀಜಗಳನ್ನು ಸೇರಿಸಿ ಹತ್ತರಿಂದ ಹದಿನೈದು ನಿಮಿಷ ಬೇಯಿಸಿ. ಪೇಸ್ಟ್ ಹದಕ್ಕೆ ಬಂದ ಕೂಡಲೇ ಸ್ಟೌ ಆಫ್ ಮಾಡಿ ಮತ್ತು ಬೇಯಿಸಿದ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಅದು ಸಂಪೂರ್ಣವಾಗಿ ತಣ್ಣಗಾದ ನಂತರ, ಈ ಪೇಸ್ಟ್ ಅನ್ನು ತೆಳುವಾದ ಬಟ್ಟೆಗೆ ಹಾಕಿ.

ಮತ್ತೊಂದೆಡೆ ಒಂದು ಕಿತ್ತಳೆಯನ್ನು ತೆಗೆದುಕೊಂಡು ಅದನ್ನು ಅರ್ಧದಷ್ಟು ಕತ್ತರಿಸಿ ರಸವನ್ನು ತೆಗೆಯಿರಿ. ಈಗ ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಸಿದ್ಧಪಡಿಸಿದ ಅಗಸೆ ಪೇಸ್ಟ್ ಅನ್ನು ಸೇರಿಸಿ. ಹಾಗೆಯೇ ಮೂರು ಚಮಚ ಕಿತ್ತಳೆ ರಸ ಮತ್ತು ಒಂದು ಚಮಚ ಗ್ಲಿಸರಿನ್ ಸೇರಿಸಿ ಮತ್ತು ಐದು ನಿಮಿಷಗಳ ಕಾಲ ಚಮಚದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ರಾತ್ರಿ ಮಲಗುವ ಮುನ್ನ ಇದನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬೆರಳುಗಳಿಂದ ಮಸಾಜ್ ಮಾಡಿ. ಅದನ್ನು ಹಾಗೆಯೇ ಬಿಟ್ಟು ಮರುದಿನ ಬೆಳಗ್ಗೆ ತಣ್ಣೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಮುಖ ಹೊಳೆಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!