spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, January 17, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಟಿ.ಎಸ್.ರುದ್ರೇಶಪ್ಪ ಜಾಮೀನು ಅರ್ಜಿ ತಿರಸ್ಕೃತ

- Advertisement -Nitte

ಹೊಸ ದಿಗಂತ ವರದಿ, ಶಿವಮೊಗ್ಗ:

ಅಕ್ರಮ ಆಸ್ತಿ ಗಳಿಕೆ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳದ ದಾಳಿಗೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ಗದಗ ಜಿಲ್ಲೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ  ಜಾಮೀನು ಅರ್ಜಿ ಶನಿವಾರ ತಿರಸ್ಕೃತಗೊಂಡಿದೆ.
ಡಿಸೆಂಬರ್ 7ರವರೆಗೆ ನ್ಯಾಯಾಂಗ ಬಂಧನ ಆದೇಶದಂತೆ ರುದ್ರೇಶಪ್ಪ ಜಾಮೀನಿನ ಮೊರೆ ಹೋಗಿದ್ದರು. ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಒಂದನೇ ಹೆಚ್ಚುವರಿ ಮತ್ತು ಸೆಷನ್ ನ್ಯಾಯಾಲಯ ಶನಿವಾರಕ್ಕೆ ತೀರ್ಪು ಮುಂದೂಡಿತ್ತು.
ಶನಿವಾರ ಅರ್ಜಿ ವಿಚಾರಣೆ ‌ನಡೆಸಿದ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಹಾಗಾಗಿ ಡಿ.7ರವರೆಗೆ ನ್ಯಾಯಾಂಗ ಬಂಧನ ನಿಶ್ಚಿತವಾಗಿದೆ. ನ.24ರಂದು ಎಸಿಬಿ ಅಧಿಕಾರಿಗಳು ರುದ್ರೇಶಪ್ಪ ಅವರ ಶಿವಮೊಗ್ಗದ ಎರಡು ಮನೆ ಸೇರಿದಂತೆ ಹಲವು ಕಡೆ ದಾಳಿ ನಡೆಸಿದ್ದರು. ಈ ವೇಳೆ ಮೂಲ ಆದಾಯಕ್ಕಿಂತ ಶೇ.400 ಆಸ್ತಿ ಹೆಚ್ಚಿರುವುದು ಪತ್ತೆಯಾಗಿತ್ತು. ನ.25ರಂದು ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ವಶಕ್ಕೆ ಪಡೆಯಲಾಗಿತ್ತು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss