Thursday, August 18, 2022

Latest Posts

ಟಿಟಿಡಿ ಮಂಡಳಿಗೆ 52 ವಿಶೇಷ ಆಹ್ವಾನಿತರ ನೇಮಕ ಮಾಡಿದ ಸರ್ಕಾರ: ಸದಸ್ಯರ ಸಂಖ್ಯೆ 81ಕ್ಕೆ ಏರಿಕೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ತಿರುಪತಿ ತಿರುಮಲ ದೇವಸ್ಥಾನ(ಟಿಟಿಡಿ)ಮಂಡಳಿಗೆ ಆಂದ್ರಪ್ರದೇಶ ಸರ್ಕಾರ 52 ವಿಶೇಷ ಆಹ್ವಾನಿತರನ್ನು ನಾಮ ನಿರ್ದೇಶನ ಮಾಡಿದೆ.
ಈ ಬಗ್ಗೆ ಆದೇಶ ಹೊರಡಿಸಿದ ಸರ್ಕಾರ, 24 ಸಾಮಾನ್ಯ ಸದಸ್ಯರು ಮತ್ತು ನಾಲ್ವರು ಪದನಿಮಿತ್ತ ಸದಸ್ಯರನ್ನು ಒಳಗೊಂಡಿರುವ ಟಿಟಿಡಿ ಮಂಡಳಿಯ ಸದಸ್ಯರ ಸಂಖ್ಯೆಯನ್ನು 81ಕ್ಕೆ ಏರಿಸಿದೆ.
ಇದರಲ್ಲಿ ‌ಬೆಂಗಳೂರಿನ ಶಾಸಕ ಎಸ್‌.ಆರ್‌.ವಿಶ್ವನಾಥ, ಶಿವಸೇನಾ ಕಾರ್ಯದರ್ಶಿ ಮಿಲಿಂದ ಕೇಶವ ನರ್ವೇಕರ್‌, ಬಿಸಿಸಿಐ ಮಾಜಿ ಅಧ್ಯಕ್ಷ ಎನ್‌. ಶ್ರೀನಿವಾಸನ್‌ ಕೂಡ ಇದ್ದಾರೆ.
ಈ ಬಗ್ಗೆ ಸಮರ್ಥಿಸಿಕೊಂಡ ಸರ್ಕಾರ ಟಿಟಿಡಿಯಲ್ಲಿನ ಆರ್ಥಿಕ, ಧಾರ್ಮಿಕ, ಸಾಮಾಜಿಕ, ಪರಿಸರ ಚಟುವಟಿಕೆಗಳನ್ನು ಪಾಲಿಸಲು ಹೆಚ್ಚಿನ ಸಂಖ್ಯೆಯ ಸದಸ್ಯರ ಅಗತ್ಯವಿದೆ ಎಂದಿದೆ.
ಆಗಸ್ಟ್ 8ರಂದು ಸರ್ಕಾರ ತಿರುಪತಿ ತಿರುಮಲ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ವೈ.ವಿ. ಸುಬ್ಬಾರೆಡ್ಡಿಯವರನ್ನು ಮರು ನೇಮಕ ಮಾಡಿತ್ತು. ವಾರ್ಷಿಕ 36 ಮಿಲಿಯನ್ ಭಕ್ತರು ತಿರುಪತಿ ತಿಲಮಲ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!