ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿ ತಿಮ್ಮಪ್ಪ ದೇವಸ್ಥಾನದ ಒಎಸ್’ಡಿ (ಆಪರೇಷನ್ ಆನ್ ಸ್ಪೆಷಲ್ ಡ್ಯೂಟಿ) ಡಾಲರ್ ಶೇಷಾದ್ರಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸೋಮವಾರ ಮುಂಜಾನೆ 4 ಗಂಟೆಗೆ ವಿಶಾಖಪಟ್ಟಣದಲ್ಲಿನ ಕಾರ್ತಿಕ ದೀಪೋತ್ಸವ ಆಚರಿಸಲು ತೆರಳಿದ್ದ ಅವರು ವಿಧಿವಶರಾಗಿದ್ದಾರೆ.
1978ರಿಂದ ಡಾಲರ್ ಶೇಷಾದ್ರಿ ಅವರು ಶ್ರೀವಾರಿ ಅಮ್ಮನವರಿಗೆ ಸೇವೆ ಸಲ್ಲಿಸಿದರು. 2007ರಲ್ಲಿ ನಿವೃತ್ತಿಗೊಂಡ ಅವರು, ಟಿಟಿಡಿಯ ಒಎಸ್’ಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಡಾಲರ್ ಶೇಷಾದ್ರಿ ಅವರ ನಿಧನ ತಿರುಮಲ ತಿರುಪತಿ ದೇವಸ್ಥಾನಕ್ಕೆ ತುಂಬಲಾಗದ ನಷ್ಟ ಎಂದು ಟಿಟಿಡಿ ಹೆಚ್ಚುವರಿ ಇಒ ಧರ್ಮರೆಡ್ಡಿ ಸಂತಾಪ ಸೂಚಿಸಿದ್ದಾರೆ.