ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 556 ಮಂದಿಯಲ್ಲಿ ಪಾಸಿಟಿವ್, ಎರಡು ಸಾವು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

ಹೊಸ ದಿಗಂತ ವರದಿ, ಉಡುಪಿ:

ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಇಬ್ಬರು ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 203ಕ್ಕೆ ಏರಿಕೆಯಾಗಿದೆ.
ಉಡುಪಿ ತಾಲೂಕಿನ 78ರ ಹರೆಯದ ವೃದ್ಧ ಮತ್ತು ಕಾರ್ಕಲ ತಾಲೂಕಿನ 46ವರ್ಷ ಪ್ರಾಯದ ವ್ಯಕ್ತಿ ಸೋಂಕಿನ ತೀವ್ರತೆ, ಉಸಿರಾಟದ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟ ಇಬ್ಬರಿಗೂ ನಾನಾ ಖಾಯಿಲೆಗಳಿದ್ದವು.
ಮಂಗಳವಾರ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿದ 3244 ಮಂದಿಯಲ್ಲಿ 556 ಜನರ ವರದಿ ಪಾಸಿಟಿವ್ ಬಂದಿದೆ. ಉಡುಪಿ ತಾಲೂಕಿನ 319, ಕುಂದಾಪುರದ 171, ಕಾರ್ಕಳ ತಾಲೂಕಿನ 64 ಮತ್ತು ಹೊರ ಜಿಲ್ಲೆಗಳ ಇಬ್ಬರಲ್ಲಿ ವ್ಯಾಧಿ ದೃಢಪಟ್ಟಿದೆ. ಹೊಸ ಸೋಂಕಿತರಲ್ಲಿ 191 ಜನರಲ್ಲಿ ಲಕ್ಷಣಗಳಿದ್ದರೆ, ಉಳಿದ 365 ಮಂದಿಯಲ್ಲಿ ಲಕ್ಷಣಗಳು ಗೋಚರಿಸಿಲ್ಲ. ಇವರಲ್ಲಿ 18ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದುಘಿ, ಉಳಿದವರು ಮನೆ ಆರೈಕೆಯಲ್ಲಿದ್ದಾರೆ.
ಹೊಸದಾಗಿ 337 ಮಂದಿ ರೋಗ ಮುಕ್ತರಾಗಿದ್ದು, ಈವರೆಗೆ 30,802 ಜನರು ಗುಣಮುಖರಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೊಳಪಟ್ಟ 5,15,195 ಮಂದಿಯಲ್ಲಿ 33,710 ಜನರಿಗೆ ಸೋಂಕು ಖಚಿತಗೊಂಡಿದೆ. ಜಿಲ್ಲೆಯಲ್ಲೀಗ ಸಕ್ರಿಯ ಸೋಂಕಿತರ ಸಂಖ್ಯೆ 2,705ಕ್ಕೆ ಏರಿಕೆಯಾಗಿದೆ ಎಂದು ಡಿಎಚ್‌ಒ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss