spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾರವಾರ -ಮಡಗಾಂವ್ ರೈಲು ಸಂಚಾರಕ್ಕೆ ಸಮ್ಮತಿ: ಕೇಂದ್ರಕ್ಕೆ ಧನ್ಯವಾದ ಎಂದ ಶಾಸಕಿ ರೂಪಾಲಿ

- Advertisement -Nitte

ಹೊಸ ದಿಗಂತ ವರದಿ, ಕಾರವಾರ:

ಕಾರವಾರ -ಮಡಗಾಂವ್ ನಡುವೆ ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಜೊತೆಗೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು ರೈಲು ಸಂಚಾರ ಆರಂಭವಾಗಲಿದೆ ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಾಲಿ ಎಸ್. ನಾಯ್ಕ ತಿಳಿಸಿದ್ದಾರೆ.
ಸೋಮವಾರ (ಅಕ್ಟೋಬರ್ 18) ದಿಂದ ಕಾರವಾರ ಮಡಗಾಂವ ನಡುವೆ ಲೋಕಲ್ ರೈಲು ಸಂಚಾರ ಆರಂಭಿಸಲಿದ್ದು, ಇದರಿಂದ ಗೋವಾಕ್ಕೆ ಪ್ರತಿದಿನ ಉದ್ಯೋಗ, ಇತರ ಕಾರಣಗಳಿಗೆ ತೆರಳುವ ಸ್ಥಳೀಯ ಜನತೆಗೆ ಅನುಕೂಲವಾಗಲಿದೆ. ತಮ್ಮ ಮನವಿಗೆ ಸ್ಪಂದಿಸಿ ರೈಲು ಸಂಚಾರಕ್ಕೆ ಸಮ್ಮತಿ ಸೂಚಿಸಿ, ವ್ಯವಸ್ಥೆ ಕಲ್ಪಿಸಿದ ಕೇಂದ್ರ ಸಚಿವರು,ಸಹಕರಿಸಿದ ಗೋವಾ ಸರ್ಕಾರ, ಸಂಸದರಾದ ಅನಂತಕುಮಾರ್ ಹೆಗಡೆ ಹಾಗೂ ಕೊಂಕಣ ರೇಲ್ವೆ ನಿಗಮಕ್ಕೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಶಾಸಕಿ ರೂಪಾಲಿ ಎಸ್. ನಾಯ್ಕ ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss