ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………
ಹೊಸ ದಿಗಂತ ವರದಿ, ತುಮಕೂರು:
ತುಮಕೂರು ಜಿಲ್ಲೆಯಲ್ಲಿ ಇಂದು 1348 ಮಂದಿ ಗುಣಮುಖರಾಗಿದ್ದು. 2273ಮಂದಿಗೆಕೊರೋನಾ ದೃಢಪಟ್ಟಿದ್ದು. ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಡಿ.ಹೆಚ್. ಓ.ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಇದುವರೆಗೆ 34810ಮಂದಿ ಗುಣಮುಖರಾಗಿದ್ದು. 12321ಸಕ್ರಿಯ ಪ್ರಕರಣಗಳಿವೆ, 47675ಖಚಿತ ಪ್ರಕರಣಗಳಿವೆ.102ಮಂದಿ ವಿಶೇಷ ನಿಗಾವಣೆಯಲ್ಲಿದ್ದಾರೇ. ಇದುವರೆಗೆ 544ಮಂದಿ ನಿಧನರಾಗಿದ್ದಾರೆ.
ಇಂದು ತುಮಕೂರಿನಲ್ಲಿ 1231ಚಿ.ನಾ.ಹಳ್ಳಿಯಲ್ಲಿ 84,ಗುಬ್ಬಿಯಲ್ಲಿ112,,ಕುಣಿಗಲ್ಲಿನಲ್ಲಿ 108,ಕೊರಟಗೆರೆ ಯಲ್ಲಿ 69,ಮಧುಗಿರಿಯಲ್ಲಿ 114,ಪಾವಗಡದಲ್ಲಿ121,ಶಿರಾದಲ್ಲಿ 360,ತಿಪಟೂರಿನಲ್ಲಿ 13ತುರುವೇಕೆರೆಯಲ್ಲಿ 61ಪಾಸಿಟೀವ್ ಪ್ರಕರಣಗಳು ದಾಖಲಾಗಿವೆ.
ಇಂದು ತುಮಕೂರಿನಲ್ಲಿಮೂವರು
ಮಹಿಳೆಯರು.ಮೂವರು ಪುರುಷರು ಗುಬ್ಬಿ ಅಮ್ಮನಘಟ್ಟದ ಮಹಿಳೆ.ಬ್ಯಾಡಗೆರೆಯ ಮಹಿಳೆ.ತುರುವೇಕೆರೆಯ ಮಹಿಳೆ ಮೃತರಾಗಿದ್ದಾರೆ.