Wednesday, August 10, 2022

Latest Posts

ತುಂಗಾ ಜಲಾಶಯದ ನಾಲೆ ಹೂಳು ಎತ್ತುವ ಕಾರ್ಯಕ್ಕೆ ಪವಿತ್ರ ರಾಮಯ್ಯ ಚಾಲನೆ

ಹೊಸದಿಗಂತ ವರದಿ, ಶಿವಮೊಗ್ಗ:

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಬರುವ ತುಂಗಾ ಜಲಾಶಯದ ಬಲ ನಾಲೆಯ ಹಾಲ ಲಕ್ಕವಳ್ಳಿ, ಕಡೆಕಲ್ ಹಾಗೂ ಕೂಸ್ಕುರು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಾಲೆಯಲ್ಲಿ ತುಂಬಿರುವ ಹೂಳು ಎತ್ತುವ ಕೆಲಸಕ್ಕೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಮಂಗಳವಾರ ಚಾಲನೆ ನೀಡಿದರು.

ತುಂಗಾ ಮತ್ತು ಭದ್ರಾ ನಾಲೆಗಳು 2005ರಲ್ಲಿ ಉನ್ನತೀಕರಿಸಿದ ನಂತರ ಕಾಲ ಕಾಲಕ್ಕೆ ನಾಲೆಗಳಲ್ಲಿ ಹೂಳು ಎತ್ತುವ ಕೆಲಸ ಆಗದೆ ಅಚ್ಚುಕಟ್ಟಿನ ಕೊನೆಯ ಭಾಗದ ರೈತರಿಗೆ ನೀರು ಸರಿಯಾಗಿ ತಲುಪುತ್ತಿರಲಿಲ್ಲ.

ಸರ್ಕಾರದಿಂದ ನೀರಾವರಿ ಇಲಾಖೆಗೆ ಪ್ರತಿವರ್ಷ ಬಿಡುಗಡೆಯಾಗುತ್ತಿದ್ದ ನಿರ್ವಹಣಾ ವೆಚ್ಚವು ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗದೆ ಕಾಲುವೆಗಳನ್ನು ನಿರ್ವಹಣೆ ಮಾಡುವಲ್ಲಿ ಹಿನ್ನಡೆಯಾಗುತಿತ್ತು. ಈ ವರ್ಷ ಕೋವಿಡ್ -19 ಮಹಾಮಾರಿಯಿಂದ ರಾಜ್ಯ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ ಪರಿಣಾಮ ಇಲಾಖೆಗೆ ಅನುದಾನ ನೀಡುವಲ್ಲಿ ತೊಂದರೆಯಾಗಿತ್ತು.

ಇದನ್ನು ಮನಗಂಡು ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುವೆಗಳನ್ನು ಸ್ವಚ್ಛ ಗೊಳಿಸುವ ಕಾರ್ಯ ಕೈಗೊಳ್ಳುವ ಜೊತೆಗೆ ಗ್ರಾಮೀಣ ಭಾಗದ ದುಡಿಯುವ ಕೈಗಳಿಗೆ ಕೆಲಸ ನೀಡಿದಂತಾಗುತ್ತದೆ ಎಂಬ ಉದ್ದೇಶದಿಂದ ಅಚ್ಚುಕಟ್ಟು ಭಾಗದಲ್ಲಿ ಚಾಲನೆ ನೀಡಲಾಗಿದೆ ಎಂದು ಪವಿತ್ರ ರಾಮಯ್ಯ ತಿಳಿಸಿದರು.

ಈ ಸಂದರ್ಭಲ್ಲಿ ಹಾಲ ಲಕ್ಕವಳ್ಳಿ ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಜಗದೀಶ್, ಕಡೆಕಲ್ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಾದ ಶಿವಮೂರ್ತಿ, ಮಂಜುನಾಥ್ ಗೌಡ  ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss