ಭೂಕಂಪದ ನೆರವಿಗೆ ‌30 ವರ್ಷಗಳ ಬಳಿಕ ಮೊದಲ ಬಾರಿಗೆ ಟರ್ಕಿ ಮತ್ತು ಅರ್ಮೇನಿಯಾ ಗಡಿ ಗೇಟ್ ಓಪನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ದಕ್ಷಿಣ ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಗಳ ಸಂತ್ರಸ್ತರ ನೆರವಿಗಾಗಿ 35 ವರ್ಷಗಳಲ್ಲಿ ಮೊದಲ ಬಾರಿಗೆ ಟರ್ಕಿ ಮತ್ತು ಅರ್ಮೇನಿಯಾ ನಡುವಿನ ಗಡಿ ಗೇಟ್‌ ಅನ್ನು ತೆರೆಯಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಅನಾಡೋಲು ಸುದ್ದಿ ಸಂಸ್ಥೆ ಮತ್ತು ರಾಜತಾಂತ್ರಿಕರೊಬ್ಬರು ತಿಳಿಸಿದ್ದಾರೆ.

ಐದು ಟ್ರಕ್‌ಗಳ ನೆರವಿನೊಂದಿಗೆ ಅರ್ಮೇನಿಯನ್ ನಿಯೋಗವೊಂದು ಪೂರ್ವ ಪ್ರಾಂತ್ಯದ ಇಗ್ದಿರ್‌ನಲ್ಲಿರುವ ಅಲಿಕನ್ ಬಾರ್ಡರ್ ಗೇಟ್ ಮೂಲಕ ಟರ್ಕಿಯನ್ನು ಪ್ರವೇಶಿಸಿದೆ.

ಅರ್ಮೇನಿಯಾದ ಟರ್ಕಿಯ ವಿಶೇಷ ರಾಯಭಾರಿ ಸರ್ದಾರ್ ಕಿಲಿಕ್ ಅವರು ಟ್ವಿಟ್ಟರ್‌ ನಲ್ಲಿ ಅರ್ಮೇನಿಯಾ ನಿಯೋಗವು ಐದು ಟ್ರಕ್‌ಗಳೊಂದಿಗೆ 100 ಟನ್ ಆಹಾರ, ಔಷಧ ಮತ್ತು ಕುಡಿಯುವ ನೀರನ್ನು ಅಲಿಕನ್ ಗಡಿ ಗೇಟ್ ಮೂಲಕ ಹಾದುಹೋಗುವ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!