ಟರ್ಕಿ-ಸಿರಿಯಾ ಭೂಕಂಪ: ಕಟ್ಟಡದ ಅವಶೇಷಗಳನ್ನು ತೆಗೆದಷ್ಟು ಸಿಗುತ್ತಿವೆ ಹೆಣಗಳು, 5 ಸಾವಿರಕ್ಕೇರಿದೆ ಮೃತರ ಸಂಖ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದೆಂದೂ ಕೇಳರಿಯದಂಥ ಭೂಕಂಪಕ್ಕೆ ಟರ್ಕಿ-ಸಿರಿಯಾ ಸಿಕ್ಕಿಹಾಕಿಕೊಂಡಿದ್ದು, ಸಾವಿನ ಸಂಖ್ಯೆ ಐದು ಸಾವಿರಕ್ಕೆ ಏರಿಕೆಯಾಗಿದೆ.

ಈಗಾಗಲೇ ಐದು ಬಾರಿ ಭೂಕಂಪನ ಸಂಭವಿಸಿದ್ದು, ತಮ್ಮವರನ್ನು ಕಳೆದುಕೊಂಡ ಜನ ಭಯಭೀತರಾಗಿದ್ದಾರೆ. ಭಾರೀ ಕಟ್ಟಡಗಳು ನೆಲಸಮವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದ್ದಂತೆಯೇ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ತೀವ್ರ ದಟ್ಟ ಮಂಜಿನ ಹವಾಮಾನ ತುರ್ತು ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗಿದೆ. ಐದು ಸಾವಿರ ಮಂದಿ ಇದ್ದ ಅಪಾರ್ಟ್‌ಮೆಂಟ್ ಧರೆಗೆ ಉರುಳಿದ್ದು, ಅವಶೇಷಗಳನ್ನು ತೆಗೆದಷ್ಟು ಮೃತದೇಹಗಳು ಪತ್ತೆಯಾಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!