ಧೂಮಪಾನದಿಂದ ದೂರವಿರಲು ವ್ಯಕ್ತಿ ಮಾಡಿದ ಸೂಪರ್‌ ಪ್ಲಾನ್:‌ ಸಕ್ಸಸ್‌ ಆಯ್ತಾ? 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅನೇಕ ಜನರು ಧೂಮಪಾನವನ್ನು ತೊರೆಯಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ, ಆದರೆ ಟರ್ಕಿಯ ವ್ಯಕ್ತಿಯೊಬ್ಬರು ಒಂದು ಹೆಜ್ಜೆ ಮುಂದ ಎಹೋಗಿ ತನ್ನ ತೆಲೆಗೆ ಪಂಜರ ಹಾಕಿಕೊಂಡು ಇದೀಗ ಸುದ್ದಿಯಲ್ಲಿದ್ದಾರೆ.

ಕೆಲವರು ಕೆಟ್ಟ ಚಟಗಳಿಂದ ಹೊರಬರಲು ಪುನರ್ವಸತಿ ಕೇಂದ್ರ, ಕೌನ್ಸೆಲಿಂಗ್ ಆಶ್ರಯಿಸುತ್ತಾರೆ. ಆದರೆ ಒಬ್ಬ ವ್ಯಕ್ತಿ ಮಾಡಿದ ಕೆಲಸ ಅಚ್ಚರಿ ಮೂಡಿಸುತ್ತದೆ. ಟರ್ಕಿಯ ಕುತಹ್ಯಾ ನಗರದ ಇಬ್ರಾಹಿಂ ಯುಸೆಲ್ ಎಂಬ ವ್ಯಕ್ತಿ ಧೂಮಪಾನದ ಚಟಕ್ಕೆ ಬಿದ್ದ. ಆದರೆ ಅವರ ತಂದೆ ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾದ ನಂತರ ಅವರು ಧೂಮಪಾನವನ್ನು ತ್ಯಜಿಸಲು ನಿರ್ಧರಿಸಿ ವಿಚಿತ್ರವಾದ ಕೆಲಸಕ್ಕೆ ಕೈ ಹಾಕಿದರು.

ಬೈಕ್ ಸವಾರರು ಧರಿಸುವ ಹೆಲ್ಮೆಟ್‌ಗಳಿಂದ ಸ್ಫೂರ್ತಿ ಪಡೆ ಪಂಜರವನ್ನಾಗಿ ತಯಾರಿಸಲು ಅವರು 130 ಅಡಿ ತಾಮ್ರದ ತಂತಿಯನ್ನು ಬಳಸಿದರು. ಸಿಗರೇಟು ಸೇದಬೇಕು ಎನಿಸಿದಾಗಲೆಲ್ಲ ಅದಕ್ಕೆ ತುತ್ತಾಗುವ ಭಯದಿಂದ ಪಂಜರ ಬೀಗವನ್ನು ಮನೆಯವರ ಕೈಗೆ ಕೊಟ್ಟಿದ್ದಾನೆ. ಈ ಅಭ್ಯಾಸದಿಂದ ಹೊರಬರಲು ಅವರ ಪತ್ನಿ ಸಾಕಷ್ಟು ಬೆಂಬಲ ನೀಡಿದರು.

ಅವರ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಟ್ಟ ಚಟಗಳಿಂದ ಮುಕ್ತಿ ಹೊಂದಲು ಸೂಕ್ತ ಕೌನ್ಸೆಲಿಂಗ್ ಜತೆಗೆ ದೃಢ ನಿರ್ಧಾರ ಕೈಗೊಳ್ಳಬೇಕು ಎಂಬುದು ಹಲವರ ಅಭಿಪ್ರಾಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!