Thursday, August 11, 2022

Latest Posts

ರಕ್ತ ಶುದ್ಧಿಗೆ ವಾರದಲ್ಲಿ ಒಂದು ದಿನ ಹಸಿ ಅರಿಶಿಣ ಕೊಂಬಿನ ಚಟ್ನಿ ಜೊತೆ ಊಟ ಮಾಡಿ.. ಇಲ್ಲಿದೆ ರೆಸಿಪಿ

ಅರಿಶಿಣ ದೇಹಕ್ಕೆ ಬಹಳ ಒಳ್ಳೆಯದು. ವಾರದಲ್ಲಿ ಒಂದು ದಿನ ಅರಿಶಿಣವನ್ನು ಸೇವಿಸಿ. ರಕ್ತ ಶುದ್ಧಿಯಾಗಿ ಕಜ್ಜಿ, ತುರಿಕೆ ನಿವಾರಣೆಯಾಗುತ್ತದೆ. ಹಾಗೆ ಅರಿಶಿಣ ಸೇವಿಸುವುದಕ್ಕೆ ಆಗುವುದಿಲ್ಲ. ಅರಿಶಿಣ ಕೊಂಬಿನ ಚಟ್ನಿ ಮಾಡಿಕೊಂಡು ಅನ್ನದ ಜೊತೆ ಸೇವಿಸಿ.

ಬೇಕಾಗುವ ಸಾಮಗ್ರಿ:

ಹಸಿ ಅರಿಶಿಣದ ಕೊಂಬು- ಆರಿ ಇಂಚಿನಷ್ಟು
ಕಡಲೇ ಬೇಳೆ- ಎರಡು ಚಮಚ
ದನಿಯಾ- ಅರ್ಧ ಚಮಚ
ಬ್ಯಾಡಗಿ ಮೆಣಸು- 5-6
ಹಸಿ ಮೆಣಸು-2
ಉಪ್ಪು
ಬೆಲ್ಲ
ಕಾಯಿ ತುರಿ-1 ಕಪ್

ಮಾಡುವ ವಿಧಾನ:

ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ಅದಕ್ಕೆ ಸಣ್ಣಗೆ ಹೆಚ್ಚಿಕೊಂಡಿರುವ ಅರಿಶಿಣ ಕೊಂಬು, ಕಡಲೆ ಬೇಳೆ, ಮೆಣಸು, ಕೊತ್ತಂಬರಿ ಕಾಳು ಹಾಕಿ ಹುರಿದುಕೊಳ್ಳಿ.

ನಂತರ ಹುರಿದುಕೊಂಡ ಮಿಶ್ರಣವನ್ನು ಕಾಯಿ ತುರಿ, ಹುಣಸೆಹಣ್ಣು, ಬೆಲ್ಲ, ಉಪ್ಪಿನೊಂದಿಗೆ ರುಬ್ಬಿಕೊಳ್ಳಿ.

ರುಬ್ಬಿಕೊಂಡ ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಐದು ನಿಮಿಷ ಕುದಿಸಿದರೆ ಚಟ್ನಿ ರೆಡಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss