spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಿಬ್ಬನ್‌ ಕತ್ತರಿಸಿ ಲ್ಯಾಬ್‌ಗೆ ಚಾಲನೆ ನೀಡಿದ ಆಮೆ: ವಿಡಿಯೋ ವೈರಲ್

- Advertisement -Nitte

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ಯಾವುದೇ ಕಟ್ಟಡ, ಕಚೇರಿ ಉದ್ಘಾಟನೆಗೆ ಸಾಮಾನ್ಯವಾಗಿ ಊರಿನ ಹಿರಿಯರು, ಗಣ್ಯರನ್ನು ಕರೆಸಿ ಅವರಿಂದ ರಿಬ್ಬನ್ ಕತ್ತರಿಸಿವುದು ರೂಢಿ. ಆದರೆ ಇಲ್ಲೊಂದು ವಿಡಿಯೋ ವೈರಲ್‌ ಆಗಿದೆ ನೋಡಿ. ಇಲ್ಲಿ ಆಮೆಯೊಂದು ಲ್ಯಾಬ್‌ ಉದ್ಘಾಸಿದೆ.

ಲಿಂಕನ್ ವಿಶ್ವ ವಿದ್ಯಾನಿಲಯದಲ್ಲಿ ಸೆರೆಯಾಗಿರವ ಈ ವಿಡಿಯೋ ಸಹಜವಾಗಿಯೇ ಎಲ್ಲರ ಗಮನ ಸೆಳೆದಿದ್ದು, ಇದೊಂದು ಅಪರೂಪದ ದೃಶ್ಯ ಎಂದು ನೆಟ್ಟಿಗರು ಕಮೆಂಟ್‌ ಮಳೆ ಸುರಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?

ವ್ಯಕ್ತಿಯೊಬ್ಬ ಆಮೆಯನ್ನು ಕೈಯಲ್ಲಿ ಹಿಡಿದಿರುವ ಮೂಲಕ ವಿಡಿಯೋ ಕ್ಲಿಪ್‌ ಆರಂಭವಾಗುತ್ತದೆ. ಕೈಯಲ್ಲಿ ಹಿಡಿದಿರುವ ಆಮೆಯನ್ನು ಎಲೆಗಳಿಂದ ತಯಾರಿಸಿದ ರಿಬ್ಬನ್‌ ಎದುರು ಹಿಡಿಯುತ್ತಾನೆ. ಆ ಆಮೆ ಅದನ್ನು ತನ್ನ ಬಾಯಿಂದ ಕತ್ತರಿಸಿ ಲ್ಯಾಬ್ ಉದ್ಘಾಟನೆ ಮಾಡುತ್ತದೆ. ಅಲ್ಲಿ ನೆರೆದಿದ್ದವರೆಲ್ಲ ಚಪ್ಪಾಳೆ ತಟ್ಟುತ್ತಾರೆ.

@buitengebieden_ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಆಗಿದೆ. ಈ ವಿಡಿಯೋ ತುಂಬಾ ಹಳೆಯದು ಆದರೆ ಈಗ ಎಲ್ಲೆಡೆ ಭಾರೀ ವೈರಲ್‌ ಆಗುತ್ತಿದೆ.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss