ನ್ಯಾನ್ಸಿ ಪೆಲೋಸಿ ಭೇಟಿ ಬೆನ್ನಲ್ಲೇ ತೈವಾನ್ ವಾಯು ಪ್ರದೇಶ ಪ್ರವೇಶಿಸಿದ ಚೀನಾದ 27 ಯುದ್ಧ ವಿಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಅಮೆರಿಕದ ಸ್ಪೀಕರ್ ‌ನ್ಯಾನ್ಸಿ ಪೆಲೋಸಿ ಭೇಟಿ ನೀಡಿ ಹೋರಟ ಕೆಲವೇ ಗಂಟೆಗಳಲ್ಲಿ ತೈವಾನ್ ವಾಯು ರಕ್ಷಣಾ ವಲಯಕ್ಕೆ ಚೀನಾ 27 ಯುದ್ಧ ವಿಮಾನಗಳನ್ನು ಕಳುಹಿಸಿದೆ.
ʼಚೀನಾದ  ವಿಮಾನಗಳು ನಮ್ಮ ವಾಯುರೇಖೆಯನ್ನು ಉಲ್ಲಘಿಸಿ ಒಳನುಗ್ಗಿವೆ. ಆರು ಜೆ -11 ಫೈಟರ್ ಜೆಟ್‌ಗಳು, ಐದು ಜೆ -16 ಮಲ್ಟಿರೋಲ್ ಫೈಟರ್‌ಗಳು ಮತ್ತು 16 ಎಸ್‌ಯು -30 ಮಲ್ಟಿರೋಲ್ ಫೈಟರ್‌ಗಳು ಬುಧವಾರ ರಿಪಬ್ಲಿಕ್‌ ಆಫ್‌ ಚೀನಾ ಪ್ರದೇಶದ ವಾಯುಗಡಿಯನ್ನು ದಾಟಿ ಒಳನುಗ್ಗಿದವು” ಎಂದು ತೈವಾನ್ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದೆ.
ಚೀನಾ ಭಾರೀ ವಿರೋಧದ ನಡುವೆಯೂ ಅಮೆರಿಕಾ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಮಂಗಳವಾರ ತೈವಾನ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ತೈವಾನ್‌ ದೇಶದ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಅಮೆರಿಕದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಪೆಲೋಸಿ ಅವರ ತೈವಾನ್ ಭೇಟಿಯು ಯುಎಸ್‌- ಚೀನಾ ನಡುವಿನ ಒಪ್ಪಂದಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಚೀನಾ ಆರೋಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!