Wednesday, August 10, 2022

Latest Posts

ಜೊಮ್ಯಾಟೊ ಪ್ರಕರಣದಲ್ಲಿ ಟ್ವಿಸ್ಟ್: ಡೆಲಿವರಿ ಬಾಯ್ ದೂರು ದಾಖಲಿಸುತ್ತಿದ್ದಂತೆ ಮಹಿಳೆ ನಾಪತ್ತೆ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಜೊಮ್ಯಾಟೊ ಡೆಲಿವರಿ ಬಾಯ್ ಹಾಗೂ ಯುವತಿ ನಡುವಿನ ಕೇಸ್ ಇದೀಗ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.
ಡೆಲಿವರಿ ಬಾಯ್ ಕಾಮರಾಜ್ ಎಫ್‌ಐಆರ್ ದಾಖಲಿಸುತ್ತಿದ್ದಂತೆಯೇ ಆರೋಪ ಮಾಡಿದ ಮಹಿಳೆ ನಾಪತ್ತೆಯಾಗಿದ್ದಾಳೆ.
ಡೆಲಿವರಿ ಬಾಯ್ ಕಾಮರಾಜ್ ಮಹಿಳೆ ಹಿತೇಶಾ ಚಂದ್ರಾಣಿ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಸಂಬಂಧ ಪೊಲೀಸರು ವಿಚಾರಣೆ ನಡೆಸಲು ಆಕೆಯನ್ನು ಸಂಪರ್ಕಿಸಲು ಯತ್ನಿಸಿದ್ದು, ಹಿತೇಶಾ ಬೆಂಗಳೂರಿನಿಂದ ಕಾಲ್ಕಿತ್ತಿರುವುದು ತಿಳಿದಿದೆ.
ಮಹಾರಾಷ್ಟ್ರದಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಹಿತೇಶಾ ಇದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಬೆಂಗಳೂರಿಗೆ ಬಂದ ತಕ್ಷಣ ಪೊಲೀಸರಿಗೆ ಹೇಳಿಕೆ ಕೊಡುವಂತೆ ಸೂಚಿಸಲಾಗಿದೆ. ಹೇಳಿಕೆ ನೀಡಲು ಮಹಿಳೆ ಬಾರದೇ ಇದ್ದಲ್ಲಿ ಆಕೆಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಕಾಮರಾಜ್ ಮಾಹಿತಿ ನೀಡಿದ್ದು, ವಾಗ್ವಾದದಲ್ಲಿ ಮಹಿಳೆ ನನಗೆ ಚಪ್ಪಲಿಯಿಂದ ಹೊಡೆಯಲು ಕೈ ಎತ್ತಿದ್ದರು. ಆ ವೇಳೆ ಆಕೆ ಉಂಗುರ ಮೂಗಿಗೆ ತಗುಲಿತ್ತು. ಅದರಿಂದ ರಕ್ತ ಬಂದಿತ್ತು. ನಾನು ಹೊಡೆಯಲು ಕೈ ಎತ್ತಿದ್ದೆ ಆದರೆ ಹೊಡೆಯಲಿಲ್ಲ ಎಂದು ಕಾಮರಾಜ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss