ನವೆಂಬರ್‌ 29ರಿಂದ ಟ್ವಿಟರ್‌ ಬ್ಲೂಟಿಕ್ ವಾಪಸ್ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟ್ವೀಟರ್‌ ನಲ್ಲಿ ಬ್ಲೂಟಿಕ್‌ ಸೇವೆಯನ್ನು ವಿರಾಮಗೊಳಿಸಿದ ಒಂದುವಾರದ ನಂತರ ʼಬ್ಲೂ ಟಿಕ್‌ʼ ಸೇವೆಯನ್ನು ಮರು ಪ್ರಾರಂಭಿಸುವುದಾಗಿ ಟ್ವೀಟರ್‌ ನ ನೂತನ ಮಾಲೀಕ ಎಲಾನ್‌ ಮಸ್ಕ್‌ ಹೇಳಿದ್ದಾರೆ. ನವೆಂಬರ್‌ 29 ರಿಂದ ಬ್ಲೂ ಟಿಕ್‌ ಸೇವೆಯನ್ನು ಮರು ಪ್ರಾರಂಬಿಸಲಾಗುತ್ತಿದೆ. ಇದು ಆರಂಭಿಕ ತಾತ್ಕಾಲಿಕ ವೇಳಾಪಟ್ಟಿಗಿಂದ ವಿಳಂಬವಾಗಿದೆ ಆದರೂ ಮುಂದಿನ ವಾರದ ಅಂತ್ಯದ ವೇಳೆಗೆ ಸೇವೆಯನ್ನು ಮರಳಿ ತರುವುದಾಗಿ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಎಲಾನ್‌ ಮಸ್ಕ್‌, “ಪಾವತಿಯಾಗದ ಎಲ್ಲಾ ಬ್ಲೂಟಿಕ್‌ ಗಳನ್ನೂ ಕೆಲವೇ ತಿಂಗಳುಗಳಲ್ಲಿ ತೆಗೆದುಹಾಕಲಾಗುವುದು” ಎಂದು ಹೇಳಿದ್ದಾರೆ. ಇದರರ್ಥ ಈ ಹಿಂದೆ ಬ್ಲೂ ಟಿಕ್‌ಗಳನ್ನು ಪರಿಶೀಲಿಸಿದ್ದ ಖಾತೆಗಳು ಈಗ ಮತ್ತೊಮ್ಮ ತಮ್ಮ ಖಾತೆಯ ಪರಿಶೀಲಿಸಿದ ಸ್ಥಿತಿಯನ್ನು ಕಾಪಾಡಿಕೊಳ್ಳಲು ಪಾವತಿಸಬೇಕಾಗುತ್ತದೆ.

ಅಲ್ಲದೇ ಹೊಸದಾಗಿ ತಂದಿರುವ ಬದಲಾವಣೆಯಲ್ಲಿ ಈಗಾಗಲೇ ಬ್ಲೂಟಿಕ್‌ ಹೊಂದಿರುವವರು ತಮ್ಮ ಖಾತೆಯ ಹೆಸರನ್ನು ಬದಲಾಯಿಸಲು ಬಯಸಿದರೆ ಅಂತಹ ಖಾತೆಯು ಟ್ವೀಟರ್‌ ಸೇವಾನಿಯಮಗಳು ಹೆಸರನ್ನು ದೃಢೀಕರಿಸುವವರೆಗೆ ನಿಲಿ ಚೆಕ್‌ ಗಳನ್ನು ಕಳೆದು ಕೊಳ್ಳಲಿವೆ ಎಂದು ಎಲಾನ್‌ ಮಸ್ಕ್‌ ಹೇಳಿದ್ದಾರೆ.

ಬಹುಪ್ರಸಿದ್ಧ ಸಾಮಾಜಿಕ ಜಾಲತಾಣವಾದ ಟ್ವಿಟರ್‌ ಅನ್ನು 44 ಬಿಲಿಯನ್‌ ಡಾಲರ್‌ ಗೆ ಖರೀದಿರುವ ಮಸ್ಕ್‌, ಟ್ವೀಟರ್‌ ಅನ್ನು ಹಿಡಿತಕ್ಕೆ ತೆಗೆದುಕೊಂಡ ನಂತರ ಬ್ಲೂಟಿಕ್‌ ವ್ಯವಸ್ಥೆಗಾಗಿ ಶುಲ್ಕಪಾವತಿ ವಿಧಾನವನ್ನು ಹೊರತಂದಿದ್ದು ಇದು ಬ್ಲೂಟಿಕ್‌ ಚಂದಾದಾರರಿಗೆ ಮಾಸಿಕ 8 ಡಾಲರ್‌ ಶುಲ್ಕ ವಿಧಿಸುತ್ತದೆ. ಯುಸ್‌, ಯುಕೆ ಮುಂತಾದ ಕಡೆಗಳಲ್ಲಿ ನ.9ರಂದು ಈ ವಿಧಾನವನ್ನು ಪರಿಚಯಿಸಲಾಗಿದೆ. ಭಾರತದಲ್ಲಿ ಈ ಚಂದಾದಾರಿಕೆ ಬೆಲೆ ಸುಮಾರು 719 ರೂ.ಗಳಾಗಬಹುದು ಎಂದು ಅಂದಾಜಿಸಲಾಗಿದೆ.

ಆದರೆ ಈ ವಿಧಾನವನ್ನು ಪರಿಚಯಿಸಿದ ಎರಡು ದಿನಗಳ ನಂತರ ಬ್ಲೂಟಿಕ್‌ ಚಂದಾದಾರಿಕೆಯಲ್ಲಿ ಕೆಲ ನಕಲಿ ಖಾತೆಗಳೂ ಕಾಣಿಸಿಕೊಂಡಿದ್ದರಿಂದ ನವೆಂಬರ್‌ 11 ರಂದು ಈ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ನವೆಂಬರ್‌ 29 ರಿಂದ ಪುನಃ ಬ್ಲೂಟಿಕ್‌ ಸೇವೆಗಳನ್ನು ಪ್ರಾರಂಭಿಸುವುದಾಗಿ ಮಸ್ಕ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!