Wednesday, August 17, 2022

Latest Posts

ಕೊರೋನಾ ವಿರುದ್ಧದ ಭಾರತದ ಹೋರಾಟಕ್ಕೆ ಟ್ವಿಟರ್ ಸಿಇಒ ಸಾಥ್: 110 ಕೋಟಿ ರೂ. ಆರ್ಥಿಕ ನೆರವು ನೀಡಿದ ಜ್ಯಾಕ್​ ಡೋರ್ಸೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ವಿರುದ್ಧದ ಭಾರತದ ಹೋರಾಟಕ್ಕೆ ಸೋಷಿಯಲ್ ಮೀಡಿಯಾ ದೈತ್ಯ ಟ್ವಿಟರ್​​ ಸಿಇಒ ಜ್ಯಾಕ್​ ಡೋರ್ಸೆ ಅವರು ವೈಯಕ್ತಿಕವಾಗಿ 15 ಮಿಲಿಯನ್ ಡಾಲರ್​​ ಅಂದರೆ ಸುಮಾರು 110 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ.
ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಡಾರ್ಸೆ, ಕೊವಿಡ್​ 19 ಪರಿಹಾರ ಕಾರ್ಯ ನಡೆಸುತ್ತಿರುವ ಕೇರ್​, ಏಡ್​ ಇಂಡಿಯಾ ಮತ್ತು ಸೇವಾ ಇಂಟರ್​ನ್ಯಾಷನಲ್ ಎನ್​ಜಿಒಗಳಿಗೆ 15 ಮಿಲಿಯನ್ ಡಾಲರ್​ಗಳನ್ನು ಹಂಚಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಜ್ಯಾಕ್​ ಡೋರ್ಸೆ ಅವರು, ಅಸೋಸಿಯೇಶನ್​ ಆಫ್ ಇಂಡಿಯಾ (AID India)ಕ್ಕೆ 2,500,000 ಡಾಲರ್​, ಕೇರ್​ ಎನ್​ಜಿಒಕ್ಕೆ 10,000,000 ಡಾಲರ್​ ಮತ್ತು ಆರ್​ಎಸ್​ಎಸ್​ನ ಅಂಗಸಂಸ್ಥೆಯಾದ ಸೇವಾ ಇಂಟರ್​ನ್ಯಾಶನಲ್​​ಗೆ 2,500,000 ಡಾಲರ್​ ನೀಡಿದ್ದಾಗಿ ಮೂಲಗಳು ತಿಳಿಸಿವೆ.
ಜ್ಯಾಕ್ ಡಾರ್ಸೆ ಅವರು ಕಳೆದ ವರ್ಷ ಏಪ್ರಿಲ್​ನಿಂದಲೂ ಜಾಗತಿಕವಾಗಿ ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಆರ್ಥಿಕ ನೆರವು ಘೋಷಿಸುತ್ತಲೇ ಇದ್ದಾರೆ. ಎನ್​ಜಿಒ ಮೂಲಕ ಹಣವನ್ನು ದೇಣಿಗೆ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 200 ಸಂಸ್ಥೆಗಳಿಗೆ ಹಣ ನೀಡಿದ್ದು, ಇದೀಗ ಭಾರತದ ಮೂರು ಎನ್​ಜಿಒಗಳಿಗೆ ದೇಣಿಗೆ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!