ಮಸ್ಕ್ ಒಡೆತನದ ಟ್ವಿಟ್ಟರಿನಿಂದ ಸಿಇಒ ಪರಾಗ್ ಅಗರ್ವಾಲ್ ವಜಾ ಆದರೆ ಅವರಿಗೆ ಸಿಗೋ ದುಡ್ಡೆಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸಾಮಾಜಿಕ ಮಾಧ್ಯಮ ಸಂಸ್ಥೆಯಾದ ಟ್ವಿಟರ್ ಮಾಲಿಕತ್ವ ನಿಯಂತ್ರಣವನ್ನು ಬದಲಾದ 12 ತಿಂಗಳೊಳಗೆ ಸಿಇಒ ಪರಾಗ್ ಅಗರವಾಲ್ ಅವರನ್ನೇನಾದರೂ ವಜಾಗೊಳಿಸಿದರೆ ಅದಕ್ಕೆ ಪ್ರತಿಯಾಗಿ ಕಂಪನಿಯು 42 ಮಿಲಿಯನ್ ಡಾಲರ್ (ಅಂದಾಜು 321 ಕೋಟಿ) ಪರಿಹಾರವನ್ನು ನೀಡಬೇಕಾಗುತ್ತದೆ ಸಂಶೋಧನಾ ಸಂಸ್ಥೆ ಈಕ್ವಿಲಾರ್ ತಿಳಿಸಿದೆ.
ವಿಶ್ವದ ನಂ.1 ಶ್ರೀಮಂತ , ಟೆಸ್ಲಾ ಸಂಸ್ಥೆಯ ಸಿಇಒ ಎಲಾನ್‌ ಮಸ್ಕ್ ಅವರು ಸೋಮವಾರ ಟ್ವಿಟರ್ ಅನ್ನು 3.36 ಲಕ್ಷ ಕೋಟಿಗೆ ಖರೀದಿಸುವ ಒಪ್ಪಂದ ಮಾಡಿಕೊಂಡಿದ್ದಾರೆ. ಪ್ರಾರಂಬದಲ್ಲಿ ಖಾಸಗಿ ಕಂಪನಿಯಾಗಿದ್ದ ಟ್ವಿಟರ್‌ 2013 ರಿಂದ ಸಾರ್ವಜನಿಕ ಕಂಪನಿಯಾಗಿ ಮಾರ್ಪಟ್ಟಿತ್ತು.
ಏಪ್ರಿಲ್ 14 ರಂದು ನಡೆದಿದ್ದ ಮಾರಾಟ ಪ್ರಕ್ರಿಯೆಯ ಮಾತುಕತೆ ವೇಳೆ ಎಲಾನ್‌ ಮಸ್ಕ್, ಟ್ವಿಟರ್ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕುರಿತಾಗಿ ತಮಗೆ ಮೆಚ್ಚುಗೆಯಿಲ್ಲ ಎಂದಿದ್ದರು.
ಈ ಹಿಂದೆ ಟ್ವಿಟರ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದ ಭಾರತ ಮೂಲದ ಅಗರವಾಲ್ ಅವರನ್ನು ನವೆಂಬರ್‌ನಲ್ಲಿ ಸಿಇಒ ಆಗಿ ನೇಮಿಸಲಾಗಿತ್ತು. 2021 ರಲ್ಲಿ ಅಗರ್ವಾಲ್‌ ಅವರಿಗೆ ಟ್ವಿಟರ್‌ ಸಂಸ್ಥೆಯು 30.4 ಮಿಲಿಯನ್ (232 ಕೋಟಿ) ವೇತನವನ್ನು ಪಾವತಿಸಿತ್ತು.
ಅಗರವಾಲ್‌ನ ಮೂಲ ವೇತನ, ಶೇರುಗಳ ಅಂದಾಜು, ಈಕ್ವಿಟಿ ಪಾವತಿಗಳನ್ನು ಅಂದಾಜಿಸಿ ಈಕ್ವಿಲರ್‌ ಸಂಸ್ಥೆಯು ಪರಾಗ್‌ ಪಡೆಯಬಹುದಾದ ʼಪರಿಹಾರ ಮೊತ್ತದʼ ಅದಾಜು ಮಾಡಿದೆ. ಆದರೆ ಈ ಅಂದಾಜಿನ ಕುರಿತು ಪ್ರತಿಕ್ರಿಯಿಸಲು ಟ್ವಿಟರ್ ಪ್ರತಿನಿಧಿಗಳು ನಿರಾಕರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!