ಹೊಸದಿಗಂತ ಆನ್ ಲೈನ್ ಡೆಸ್ಕ್:
ಮೈಕ್ರೋಬ್ಲಾಗಿಂಗ್ ವೆಬ್ಸೈಟ್ ಟ್ವಿಟರ್ ತಾಂತ್ರಿಕ ದೋಷ ಕಂಡುಬಂದಿದ್ದು, ಹಲವು ದೇಶಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಕೆಲವರಿಗೆ ಟ್ವೀಟ್ ಮಾಡಲು ಸಮಸ್ಯೆಯಾಗುತ್ತಿದ್ದರೆ ಮತ್ತೆ ಕೆಲವರಿಗೆ ಟ್ವಿಟರ್ ಫೀಡ್ಗಳು ಕಾಣಿಸದಂತಾಗಿದೆ. ಕೆಲವರಿಗೆ ಟ್ವೀಟ್ಗಳು ಕಂಡರೂ ಅವುಗಳಿಗೆ ಕಮೆಂಟ್ ಮಾಡಲು, ರೀಟ್ವೀಟ್ ಮಾಡಲು ಅಥವಾ ಲೈಕ್ ಮಾಡಲು ಸಾಧ್ಯವಾಗದೇ ಪರದಾಡುವಂತಾಗಿದೆ.
ಈಕುರಿತು ಟ್ವಿಟರ್ ಸಪೋರ್ಟ್ ಅಧಿಕೃತ ಖಾತೆ ಟ್ವೀಟ್ ಮಾಡಿ, ಶೀಘ್ರವೇ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸುವುದಾಗಿ ಹೇಳಿದೆ. ಕಳೆದ ವರ್ಷ ಇಂಥದ್ದೇ ಸಮಸ್ಯೆ ಟ್ವಿಟರ್ ಬಳಕೆದಾರರಿಗೆ ಎದುರಾಗಿತ್ತು. ಸುಮಾರು 2 ಗಂಟೆಗೂ ಹೆಚ್ಚು ಕಾಲ ಟ್ವಿಟರ್ನ್ನು ಬಳಸಲಾಗದೇ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.