ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೇಸ್ ಬಗ್ಗೆ ಸಮಗ್ರ ತನಿಖೆ ನಡೆಸಿರುವ ಪೊಲೀಸ್ ಅಧಿಕಾರಿಗಳು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ.
ಇದೀಗ ಚಾರ್ಜ್ಶೀಟ್ನಲ್ಲಿ ಇಬ್ಬರು ಸ್ಯಾಂಡಲ್ವುಡ್ನ ನಟಿಯ ಹೆಸರನ್ನೂ ಕೂಡ ಉಲ್ಲೇಖ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಇದರಲ್ಲಿ ಒಂದು ಹೆಸರು ನಟಿ ರಾಗಿಣಿ ದ್ವಿವೇದಿ ಎನ್ನಲಾಗಿದೆ ಆರೋಪಿ ಪ್ರದೂಶ್ ಸ್ವ-ಇಚ್ಚಾ ಹೇಳಿಕೆಯಲ್ಲಿ ಇಬ್ಬರ ನಟಿಯರ ಹೆಸರು ಉಲ್ಲೇಖ ಮಾಡಲಾಗಿದೆ. ಆ ಇಬ್ಬರು ನಟಿಯರಿಗೂ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದನಂತೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ.
ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ಬಳಿಕ ದರ್ಶನ್ ಆತನ ಮೊಬೈಲ್ ತೆಗೆದು ಪ್ರದೂಶ್ಗೆ ನೀಡಿದ್ದರು. ಈ ವೇಳೆ ರೇಣುಕಾಸ್ವಾಮಿ ಮೊಬೈಲ್ ಅನ್ನು ಪ್ರದೂಶ್ ನೋಡಿದ್ದ. ಆ ವೇಳೆ ಇಬ್ಬರು ನಟಿಯರಿಗೂ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ದರ್ಶನ್ಗೆ ಹೇಳಿದ್ದೆ ಎಂದು ಪ್ರದೂಶ್ ಹೇಳಿಕೆ ನೀಡಿದ್ದಾರೆ ಅಂತಾ ಪೊಲೀಸರು ಉಲ್ಲೇಖ ಮಾಡಿದ್ದಾರೆ.