Tuesday, August 16, 2022

Latest Posts

ಕಾಫಿ ಸಿಪ್ಪೆಯಡಿ ಬೀಟೆ ನಾಟಾ ಸಾಗಾಟ: ಇಬ್ಬರ ಬಂಧನ, 30ಲಕ್ಷ ರೂ. ಮೌಲ್ಯದ ಮಾಲು ವಶ

ಹೊಸದಿಗಂತ ವರದಿ, ಸಾಗಾಟಕುಶಾಲನಗರ:

ಕಾಫಿ ಸಿಪ್ಪೆ ಹಾಗೂ ಭತ್ತದ ಹೊಟ್ಟಿನ ಮೂಟೆಗಳ ಅಡಿಯಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು, ಸುಮಾರು 30 ಲಕ್ಷ ರೂ. ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಲಾರಿ ಚಾಲಕ ಸಿದ್ದಾಪುರದ ಇರ್ಷಾದ್ ಹಾಗೂ ಇಂಜಿಲಗೆರೆಯ ಮಣಿ ಎಂದು ಗುರುತಿಸಲಾಗಿದೆ.

ಮಂಗಳವಾರ ಬೆಳಗಿನ ಜಾವ 2ಗಂಟೆ ಸುಮಾರಿಗೆ ಕುಶಾಲನಗರ ವಲಯದ ಆನೆಕಾಡು ಶಾಖಾ ವ್ಯಾಪ್ತಿಯ ರಸಲ್ ಪುರ ಗ್ರಾಮದಲ್ಲಿ ಸಿದ್ದಾಪುರ ಕಡೆಯಿಂದ ಬರುತ್ತಿದ್ದ ಲಾರಿಯನ್ನು ಖಚಿತ ಮಾಹಿತಿ ಮೇರೆಗೆ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಕಾಫಿ ಸಿಪ್ಪೆ ಮತ್ತು ಭತ್ತದ ಹೊಟ್ಟಿನ ಮೂಟೆಗಳ ಕೆಳಗೆ ಬಚ್ಚಿಟ್ಟಿದ್ದ ಸುಮಾರು 15 ಬೀಟೆ ನಾಟಾಗಳು ಪತ್ತೆಯಾಗಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿಯಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದ ಸಿಬ್ಬಂದಿಗಳು, ಲಾರಿ ಸಹಿತ 30ಲಕ್ಷ ರೂ. ಮೌಲ್ಯದ ಮಾಲು ವಶಪಡಿಸಿಕೊಂಡಿದ್ದು, ನಾಟಾಗಳನ್ನು ಎಲ್ಲಿಂದ ಇಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದರ ಬಗ್ಗೆ
ವಿಚಾರಣೆ ನಡೆಸುತ್ತಿದ್ದಾರೆ.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಮತ್ತು ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಜೆ.ಅನನ್ಯ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಪಿ ರಂಜನ್, ಅನಿಲ್ ಡಿಸೋಜ,ಕೆ.ಎನ್ ದೇವಯ್ಯ, ಕೆ.ಎಸ್ ಸುಬ್ರಾಯ, ಅರಣ್ಯ ರಕ್ಷಕರಾದ ಆನಂದ ರಾಮಪ್ಪ ಮಾಲುಗುಂದ, ಸಿದ್ಧರಾಮ ನಾಟಿಕಾರ, ವಾಹನ ಚಾಲಕರಾದ ಕೆ.ಡಿ ವಾಸು, ಆನೆ ಮಾವುತ ಮಂಜು ಮತ್ತು ಆರ್.ಆರ್.ಟಿ ಸಿಬ್ಬಂದಿಗಳಾದ ಶಾಂತ, ಪ್ರದೀಪ, ಸುನಿಲ್, ರಮೇಶ ಮತ್ತು ಅಶೋಕ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss