ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಇಬ್ಬರು ಬಿಎಸ್ಎಫ್ ಯೋಧರ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಮಧ್ಯ ಆಫ್ರಿಕಾ ರಾಷ್ಟ್ರ ಕಾಂಗೋ ಗಣರಾಜ್ಯ ಆಂತರಿಕ ಗಲಭೆಗಳಿಂದ ಕಂಗೆಟ್ಟಿದೆ. ಮಂಗಳವಾರ ದೇಶದ ಬುಟೆಂಬೊ ನಗರದ ಗೋಮಾ ಎಂಬಲ್ಲಿ ನಡೆದ ಹಿಂಸಾಚಾರದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಇಬ್ಬರು ಭಾರತೀಯ ಬಿಎಸ್‌ಎಫ್ ಯೋಧರು ಸೇಎರಿದಂತೆ ಐವರು ಸಾವನ್ನಪ್ಪಿದ್ದಾರೆ.
. “ಕಾಂಗೊದ ಪೂರ್ವ ಪ್ರದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರವನ್ನು ಶಾಂತಿಪಾಲನಾ ಪಡೆಗಳು ನಾಗರಿಕರನ್ನು ರಕ್ಷಿಸಲು ವಿಫಲವಾಗಿದೆ ಎಂದು ಆರೋಪಿಸಿ ಗೋಮಾದಲ್ಲಿ ಮಂಗಳವಾರ ನಡೆದ ಹಿಂಸಾತ್ಮಕವಾಗಿ ತಿರುಗಿತು. ಈ ವೇಳೆ ದುಷ್ಕರ್ಮಿಗಳು ವಿಶ್ವಸಂಸ್ಥೆಯ ದೊಡ್ಡ ಸೇನಾನೆಲೆಯ ಮೇಲೆ ದಾಳಿ ನಡೆಸಿ ಅಲ್ಲಿನ ಆಸ್ತಿಗೆ ಬೆಂಕಿ ಹಚ್ಚಿದ್ದಾರೆ.  500 ಕ್ಕೂ ಹೆಚ್ಚು ಜನರ ಗುಂಪನ್ನು ನಿಯಂತ್ರಿಸಲು ಕಾಂಗೋಲೀಸ್ ಪೊಲೀಸ್ (ಪಿಎನ್‌ಸಿ) ಮತ್ತು ಆರ್ಮಿ (ಎಫ್‌ಎಆರ್‌ಡಿಸಿ) ಸಾಧ್ಯವಾಗಲಿಲ್ಲ ಎಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಉಗಾಂಡಾ ಗಡಿಗೆ ಸಮೀಪವಿರುವ ಗೋಮಾ ನಗರದಲ್ಲಿ ಜನರ ಪ್ರತಿಭಟನೆಯ ಸಂದರ್ಭದಲ್ಲಿ ಬಿಎಸ್‌ಎಫ್‌ನ ಇಬ್ಬರು ವೀರ ಭಾರತೀಯ ಶಾಂತಿಪಾಲಕರು ಹುತಾತ್ಮರಾರುವುದಕ್ಕೆ ತೀವ್ರ ದುಃಖವಾಗಿದೆ. ಅವರು ವಿಶ್ವಸಂಸ್ಥೆಯ ಶಾಂತಿಪಾಲನ ಪಡೆಯ ಭಾಗವಾಗಿದ್ದರು. ಈ ಅತಿರೇಕದ ದಾಳಿಯ ದುಷ್ಕರ್ಮಿಗಳನ್ನು ಶೀಘ್ರವೇ ಕಾನೂನಿನನ್ವಯ ಶಿಕ್ಷೆಗೆ ಒಳಪಡಿಸಬೇಕು. ದುಃಖತಪ್ತ ಕುಟುಂಬಗಳಿಗೆ ಸಂತಾಪ’ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವಿಟ್ಟರ್ ನಲ್ಲಿ ಅತಿಮ ನಮನ ಸಲ್ಲಿಸಿದ್ದಾರೆ.
ಯುಎನ್ ಮಿಷನ್ ಕಾಂಗೋದಲ್ಲಿ 16,000 ಕ್ಕೂ ಹೆಚ್ಚು ಯೋಧರನ್ನು ಹೊಂದಿದೆ. ಕಾಂಗೋಸ್ ಪಡೆಗಳು ಮತ್ತು ಎಮ್-22 ಬಂಡುಕೋರರ ನಡುವೆ ಕಾದಾಟವು ಉಲ್ಬಣಗೊಂಡಿದ್ದರಿಂದ ಪ್ರತಿಭಟನೆಗಳು ನಡೆಯುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!