Sunday, August 14, 2022

Latest Posts

ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಮಕ್ಕಳು ಸಾವು

ದಿಗಂತ ವರದಿ ರಾಮನಗರ :

ಬಾರೀ ಮಳೆಯಿಂದ ತುಂಬಿದ್ದ ಕೆರೆಕಟ್ಟೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ಮೃತಪಟ್ಟ ಘಟನೆ ರಾಮನಗರ ಜಿಲ್ಲೆಯ ಬಿಡದಿಯ ಕೆಂಚನಕುಪ್ಪೆ ಗ್ರಾಮದಲ್ಲಿ ಸಂಭವಿಸಿದೆ.
ಸರಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿಗಳಾದ ಕೌಶಿಕ್ (12) ಮತ್ತು ಕರ್ಣ (11) ಮೃತ ದುರ್ದೈವಿಗಳು
ಒಂದು ವಾರದಿಂದ ಸುರಿದ ಭಾರೀ ಮಳೆಗೆ ಕೆಂಚನಕುಪ್ಪೆ ಕುಂಬಾರು ಕಟ್ಟೆ ಭರ್ತಿಯಾಗಿದ್ದು, ಕೆರೆಯಲ್ಲಿ ಈಜಲು ನಿನ್ನೆ ಸಂಜೆ ತೆರಳಿದ್ದರು.
ನಿನ್ನ ಸಂಜೆ ನೀರಲ್ಲಿ ಮುಳುಗಿದ ಬಾಲಕರ ಶವಗಳನ್ನು ಇಂದು ಬೆಳಗ್ಗೆ ನುರಿತ ಈಜುಗಾರರ ಸಹಾಯದಿಂದ ಹೊರಗೆ ತೆಗೆಯಲಾಗಿದೆ. ರಾಮನಗರ ಬಿಡದಿ ಪೋಲಿಸರಿಂದ ಪರಿಶೀಲನೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss