ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದ ಅತ್ಯಂತ ದೊಡ್ಡ ಆನ್ ಲೈನ್ ಆಹಾರ ವಿತರಕ ಸಂಸ್ಥೆ ಸ್ವಿಗ್ಗಿ ತನ್ನ ಮಹಿಳಾ ಡೆಲಿವರಿ ಸಿಬ್ಬಂದಿಗೆ ಎರಡು ದಿನ ಪೀರಿಯಡ್ಸ್ ರಜೆ ನೀಡುವುದಾಗಿ ಘೋಷಿಸಿದೆ.
ಸ್ವಿಗ್ಗಿ ತನ್ನ ಸಂಸ್ಥೆಯಲ್ಲಿ ಸದ್ಯ 1000 ಮಹಿಳಾ ವಿತರಕ ಸಿಬ್ಬಂದಿಗಳಿದ್ದು, ಇವರಿಗೆ ಆರಾಮದಾಯಕ ವಾತಾವರಣ ಸೃಷ್ಟಿಸಲು ಈ ನಿರ್ಣಯ ಕೈಗೊಂಡಿದೆ.
ಈ ಬಗ್ಗೆ ಮಾತನಾಡಿದ ಸ್ವಿಗ್ಗಿ ಉಪಾಧ್ಯಕ್ಷ ಮಿಹಿರ್ ಶಾ, ಸ್ವಿಗ್ಗಿ ವಿತರಕ ಸಿಬ್ಬಂದಿಯಾಗಿ ಕೆಲಸ ಮಾಡುವ ಮಹಿಳೆಯರಿಗೆ ತಮ್ಮ ಪೀರಿಯಡ್ಸ್ ದಿನಗಳಂದು ಕೆಲಸ ಮಾಡೋದು ಅನಾನುಕೂಲವಾಗಲಿದೆ. ಹಾಗಾಗಿ ನಾವು ಮಹಿಳಾ ವಿತರಕರಿಗೆ ಯಾವುದೇ ಪ್ರಶ್ನೆಗಳಿಲ್ಲದೆ ಎರಡು ದಿನ ವೇತನ ಕಡಿತಗೊಳಿಸದೆ ರಜೆ ನೀಡಲಿದ್ದೇವೆ ಎಂದಿದ್ದಾರೆ.
ಅಷ್ಟೇ ಅಲ್ಲಾ ಸ್ವಿಗ್ಗಿ ದೇಶದ ಹಲವಾರು ರೆಸ್ಟೋರೆಂಟ್ ಹಾಗೂ ಪೆಟ್ರೋಲ್ ಬಂಕ್ ಗಳಲ್ಲಿ ಮಹಿಳಾ ಹಾಗೂ ಪುರುಷ ಆಹಾರ ವಿತರಕರಿಗೆ ಟಾಯ್ಲೆಟ್ ಪ್ರವೇಶ ಒದಗಿಸಲು ಅನುಮತಿ ಪಡೆದಿದೆ.