Tuesday, June 28, 2022

Latest Posts

ಎರಡು ದಿನಗಳ ಈಶಾನ್ಯ ಭೇಟಿ: ಅಮಿತ್ ಶಾ ಶಿಲ್ಲಾಂಗ್‌ನಲ್ಲಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಎರಡು ದಿನಗಳ ಈಶಾನ್ಯ ರಾಜ್ಯಗಳ ಭೇಟಿಗಾಗಿ ಶನಿವಾರ ಮೇಘಾಲಯದ ಶಿಲ್ಲಾಂಗ್ ತಲುಪಿದರು. ಕಳೆದ ಏಪ್ರಿಲ್-ಮೇಯಲ್ಲಿ ನಡೆದ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಜಯಭೇರಿಯ ಬಳಿಕ , ಈಶಾನ್ಯ ರಾಜ್ಯಗಳಿಗಿದು ಅಮಿತ್ ಶಾ ಅವರ ಮೊದಲ ಭೇಟಿಯಾಗಿದೆ.
ಈ ಸಂದರ್ಭ ಅವರು ಅಸ್ಸಾಂ, ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಮ್ , ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಒಳಗೊಂಡ ಎಂಟು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು, ಪೊಲೀಸ್ ಮುಖ್ಯಸ್ಥರ ಜೊತೆ ಅಂತಾರಾಜ್ಯ ವಿವಾದಗಳ ಕುರಿತಂತೆ ಮಾತುಕತೆ ನಡೆಸಲಿದ್ದಾರೆ.
ಹಾಗೆಯ ಈಶಾನ್ಯ ರಾಜ್ಯಗಳಲ್ಲಿನ ಕೋವಿಡ್-19 ಪರಿಸ್ಥಿತಿ ಬಗೆಗೂ ಚರ್ಚೆಗಳು ನಡೆಯಲಿವೆ.ಈಶಾನ್ಯದ ಹತ್ತಾರು ಜಿಲ್ಲೆಗಳಲ್ಲಿ ಹೊಸದಾಗಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಲಾರಂಭಿಸಿರುವುದು ಚಿಂತೆಗೆ ಕಾರಣವಾಗಿದೆ. ಈಶಾನ್ಯದ ಕೆಲವು ಜಿಲ್ಲೆಗಳಲ್ಲಿ ಕೋವಿಡ್-೧೯ ಪಾಸಿಟಿವಿಟಿ ದರ ಶೇ.10ಕ್ಕಿಂತಲೂ ಹೆಚ್ಚಿರುವುದು ಕಳವಳಕ್ಕೆ ಕಾರಣವಾಗಿದೆ.
ಹಾಗೆಯೇ ಈಶಾನ್ಯದ ರಾಜ್ಯಗಳಲ್ಲಿನ ಕಾನೂನು ಮತ್ತು ಸುವ್ಯವಸ್ಥೆ, ಈಶಾನ್ಯದಲ್ಲಿ ಕೇಂದ್ರ ಸ್ಪೇಸ್ ಸೈನ್ಸ್ ಅಂಡ್ ಟೆಕ್ ಆರ್ಗನೈಸೇಶನ್‌ನಿಂದ ನಡೆಯುತ್ತಿರುವ ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್ (ಎನ್‌ಇಎಸ್‌ಎಸಿ)ಕೆಲಸಗಳ ಕುರಿತಂತೆಯೂ ಪ್ರಮುಖವಾಗಿ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.ಈ ಸಂದರ್ಭ ಈಶಾನ್ಯ ಅಭಿವೃದ್ಧಿಗಾಗಿ ಇರುವ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ,ಕೇಂದ್ರ ವಿಜ್ಞಾನ , ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಇಸ್ರೋ ಅಧ್ಯಕ್ಷ ಕೆ.ಶಿವನ್ ಮತ್ತಿತರರೂ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಶಿಲ್ಲಾಂಗ್‌ನಲ್ಲಿ ಬಹುರಾಜ್ಯ ಬಸ್ ನಿಲ್ದಾಣ, ಹೊಸ ಶಿಲ್ಲಾಂಗ್ ಟೌನ್‌ಶಿಪ್‌ನಲ್ಲಿ ಒಂದು ಕ್ರಯೋಜೆನಿಕ್ ಪ್ಲಾಂಟ್ ಉದ್ಘಾಟನೆಯೂ ನಡೆಯಲಿದೆ.ಸೊಹ್ರಾ (ಹಿಂದಿನ ಚಿರಾಪುಂಜಿ)ದಲ್ಲಿ ಅರಣ್ಯೀಕರಣ ಯೋಜನೆ ಇತ್ಯಾದಿ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶ್ರೀರಾಮಕೃಷ್ಣ ಆಶ್ರಮ ಭೇಟಿ ಕಾರ್ಯಕ್ರಮವೂ ಇದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss