ನಮಿಬಿಯಾದಿಂದ ಭಾರತಕ್ಕೆ ಬಂದ ಚೀತಾಗಳ ರಕ್ಷಣೆಗೆ ನಿಂತಿವೆ ಎರಡು ಆನೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದಲ್ಲಿ ಚೀತಾಗಳನ್ನು ಮರುಪರಿಚಯಿಸುವ ಐತಿಹಾಸಿಕ ಯೋಜನೆಗೆ ಪ್ರಧಾನಿ ಮೋದಿ ಮೊನ್ನೆ ಮೊನ್ನೆಯಷ್ಟೇ ಚಾಲನೆ ನೀಡಿದ್ದಾರೆ. ಚೀತಾಗಳನ್ನು ನಮೀಬಿಯಾದಿಂದ ಏರ್‌ ಲಿಫ್ಟ್‌ ಮಾಡಿ ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿದೆ. ಅವುಗಳ ಮೇಲ್ವಿಚಾರಣೆಗೆ ಕಾಲರ್‌ ಗಳು, ಸೆಟಲೈಟ್‌ ಟ್ರ್ಯಾಕಿಂಗ್‌ ಮುಂತಾದ ವಿಧಾನಗಳಿದ್ದು ಅವುಗಳನ್ನು ನಿರ್ವಹಿಸಲು 24 ಗಂಟೆಯೂ ನಿಗಾಡುವ ತಂಡವೊಂದನ್ನು ಮೀಸಲಿಡಲಾಗಿದೆ.

ಪ್ರಸ್ತುತ ಅವುಗಳ ರಕ್ಷಣಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲಾಗಿದ್ದು ಇದೀಗ ನರ್ಮದಾಪುರಂನ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಿಂದ ಎರಡು ಆನೆಗಳನ್ನು ಚಿರತೆಗಳ ರಕ್ಷಣೆಗೆಂದೇ ಕರೆತರಲಾಗಿದೆ. ಈಗಾಗಲೇ ಹಲವು ರಕ್ಷಣಾ ಕಾರ್ಯಾಚರಣೆಗಳ ಅನುಭವ ಈ ಆನೆಗಳಿಗಿದ್ದು ಇವುಗಳು ಚೀತಾಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಿವೆ.

ಲಕ್ಷ್ಮಿ ಮತ್ತು ಸಿದ್ಧನಾಥ್‌ ಎಂಬ ಹೆಸರಿನ ಈ ಆನೆಗಳು ಈ ಮುಂಚೆ ನಾಲ್ಕಿ ಚಿರತೆ ಸಂರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಪ್ರಮುಖ ಪಾತ್ರ ವಹಸಿವೆ. ಎರಡೂ ಆನೆಗಳು ಈಗ ಚಿರತೆಗಳ ಮೇಲೆ ನಿಗಾ ಇಡುವುದರೊಂದಿಗೆ ರಾಷ್ಟ್ರೀಯ ಉದ್ಯಾನವನದ ಭದ್ರತಾ ತಂಡಗಳೊಂದಿಗೆ ಹಗಲು ರಾತ್ರಿ ಗಸ್ತು ತಿರುಗಲಿವೆ.

ಚೀತಾಗಳಿಗೆ ಒಂದು ತಿಂಗಳ ಕ್ವಾರಂಟೈನ್‌
ನಮೀಬಿಯಾದಿಂದ ಕುನೊಗೆ ಆಗಮಿಸಿದ ಚಿರತೆಗಳು ವಿಶೇಷ ಆವರಣದಲ್ಲಿ ಕ್ವಾರಂಟೈನ್‌ನಲ್ಲಿ ಒಂದು ತಿಂಗಳು ಕಳೆಯಬೇಕಾಗುತ್ತದೆ. ಸಿದ್ಧನಾಥ್ ಮತ್ತು ಲಕ್ಷ್ಮಿ ಈ ಆವರಣಗಳಲ್ಲಿ ಇರುವ ಚಿರತೆಗಳ ಮೇಲೆ ನಿಗಾ ಇಡುತ್ತಿದ್ದಾರೆ. ಯಾವುದೇ ವನ್ಯಜೀವಿಗಳು ಆವರಣದೊಳಗೆ ಬರದಂತೆ ನೋಡಿಕೊಳ್ಳಲು ಸಿದ್ಧನಾಥ್ ಮತ್ತು ಲಕ್ಷ್ಮಿ ಅವರು ಅರಣ್ಯ ಸಿಬ್ಬಂದಿಯೊಂದಿಗೆ ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ.‌

ಅದರಲ್ಲೂ ವಿಶೇಷವಾಗಿ 30 ವರ್ಷದ ಸಿದ್ಧನಾಥ್‌ ಆನೆಗೆ ಕಾರ್ಯಾಚರಣೆಯಲ್ಲಿ ವಿಶೇಷ ಅನುಭವವಿದ್ದು ಈ ಹಿಂದೆ ಹುಲಿಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಆತನ ಪಾತ್ರದಿಂದಾಗಿ ರಾಜ್ಯದಲ್ಲಿಯೇ ಹೆಸರುವಾಸಿಯಾಗಿದ್ದಾನೆ.

ಪ್ರಸ್ತುತ ನಮೀಬಿಯಾದಿಂದ ಆಗಮಿಸಿರುವ ವಿಶೇಷ ಅತಿಥಿಗಳಿಗೆ ಇಬ್ಬರು ಆನೆಗಳ ಟೈಟ್‌ ಸೆಕ್ಯುರಿಟಿ ಒದಗಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!