ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎರಡು ತಿಂಗಳ ಬಳಿಕ ಗುಮ್ಮಟ ನಗರಿ ಅನ್ ಲಾಕ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………

ಹೊಸ ದಿಗಂತ ವರದಿ, ವಿಜಯಪುರ:

ಕಳೆದ ಸುಮಾರು ಎರಡು ತಿಂಗಳಿಂದ ಮನೆ ವನವಾಸದಲ್ಲಿದ್ದ ಗುಮ್ಮಟ ನಗರಿಯ ಜನರಿಗೆ ಜೂ.21 ರಿಂದ ಅನ್ವಯವಾಗುವಂತೆ ಮುಕ್ತಿ ಸಿಕ್ಕಿದ್ದು, ಅನ್ ಲಾಕ್ ಜಾರಿಗೊಂಡಿದೆ.
ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.5 ಕ್ಕಿಂತಲು ಕಡಿಮೆ ಇದ್ದರು, ಲಾಕ್ ಡೌನ್ ಸಡಿಲಿಕೆ ಮಾಡದ ಹಿನ್ನೆಲೆ, ಜಿಲ್ಲೆಯ ಜನರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು.
ಹೀಗಾಗಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಜೂ.21 ರಿಂದ ಬೆಳಗ್ಗೆ 5 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಜಿಲ್ಲೆಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ನಿಯಮವನ್ನು ವಿಧಿಸಿ, ಅನ್ ಲಾಕ್ ಜಾರಿಗೊಳಿಸಿದೆ.
ದಿನಸಿ ವ್ಯಾಪಾರದ ಜೊತೆಗೆ, ವಾಣಿಜ್ಯ ವ್ಯಾಪಾರಕ್ಕೂ ಅವಕಾಶ ನೀಡಿ, ಜಿಲ್ಲೆಯನ್ನು ಅನ್ಲಾಕ್ ಪಟ್ಟಿಗೆ ಸೇರಿಸಿ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಸದ್ಯ ಹೊರಡಿಸಿದ ಹೊಸ ಆದೇಶದಲ್ಲಿ ಉಡುಪಿ, ಬೆಂಗಳೂರು, ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಮತ್ತು ವಿಜಯಪುರ ಜಿಲ್ಲೆಗಳನ್ನು ಅನ್ ಲಾಕ್ ಜಿಲ್ಲೆಗಳ ಪಟ್ಟಿಗೆ ಸೇರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss