ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಬೆಂಗಳೂರಿನಲ್ಲಿ ಡೆಲ್ಟಾ ರೂಪಾಂತರದಲ್ಲೇ ಮತ್ತೆ ಎರಡು ರೂಪಾಂತರ ಮಾದರಿಗಳು ಪತ್ತೆಯಾಗಿರುವ ಬಗ್ಗೆ ಕೋವಿಡ್ ವಾರ್ ರೂಂ ಆತಂಕಕಾರಿ ವರದಿ ಬಿಡುಗಡೆ ಮಾಡಿದೆ.
ಡೆಲ್ಟಾ ರೂಪಾಂತರ ಮಾದರಿಯಲ್ಲಿಎವೈ4 ಮತ್ತು ಎವೈ 12 ಎಂಬ ಎರಡು ರೂಪಾಂತರ ಮಾದರಿಗಳು ಪತ್ತೆಯಾಗಿದ್ದು, ತಜ್ಞರಲ್ಲಿ ಆತಂಕ ಮೂಡಿಸಿದೆ. ಈ ಹೊಸ ರೂಪಾಂತರ ಮಾದರಿಯ ಸೋಂಕು ಲಸಿಕೆಯಿಂದ ವ್ಯಕ್ತಿಯಲ್ಲಿ ಉತ್ಪತ್ತಿಯಾಗಿರುವ ರೋಗನಿರೋಧಕ ಶಕ್ತಿಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ.
ಭಾರತೀಯ ಜಿನೋಮಿಕ್ಸ್ ಕನ್ಸೋರ್ಟಿಯಂ ನ ವರದಿಯ ಪ್ರಕಾರ ಇಸ್ರೇಲಿನಲ್ಲಿ ಶೇ. 60ರಷ್ಟು ಜನಸಂಖ್ಯೆ ಲಸಿಕೆ ಪಡೆದಿದ್ದರೂ ಕೂಡ ಎವೈ 12 ರೂಪಾಂತರ ಸೋಂಕು ಉಲ್ಬಣವಾದ ಕೊರೋನಾ ಸೋಂಕಿಗೆ ಕಾರಣವಾಗಿತ್ತು.
ಡೆಲ್ಟಾ ರೂಪಾಂತರ ಸೋಂಕಿನ ಮತ್ತೆರಡು ರೂಪಾಂತರಗಳನ್ನು ತಜ್ಞರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮತ್ತೆ ಕೆಲವು ರೂಪಾಂತರಗಳು ಮಾಹಿತಿಕೋಶದಲ್ಲಿ ವರದಿಯಾಗದೆ ಇರುವುದು ಮತ್ತಷ್ಟು ಭೀತಿ ಹೆಚ್ಚಿಸಿದೆ.