ಒಂದೇ ಬಾತ್‌ರೂಂನಲ್ಲಿ ಎರಡೆರೆಡು ಶೌಚಾಲಯ, ಇದೆಂಥಾ ಅವಸ್ಥೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾತ್‌ರೂಂನಲ್ಲಿ ಕಮೋಡ್ ಇರುವುದನ್ನು ಎಲ್ಲರೂ ನೋಡಿದ್ದೇವೆ ಆದರೆ ಒಂದೇ ಶೌಚಾಲಯದಲ್ಲಿ ಎರಡೆರಡು ಶೌಚಾಲಯ ಇರುವುದನ್ನು ಎಲ್ಲಾದರೂ ಕಂಡಿದ್ದೀರಾ..
ತಮಿಳುನಾಡಿನ ರಾಜ್ಯ ಕೈಗಾರಿಕೆಗಳ ಉತ್ತೇಜನ ನಿಗಮಕ್ಕೆ ಶ್ರೀಪೆರಂಬಂದೂರಿನಲ್ಲಿ ಹೊಸತಾಗಿ ನಿರ್ಮಿಸಲಾದ ಕಟ್ಟಡಲ್ಲಿ ಒಂದೇ ಬಾತ್‌ರೂಂನಲ್ಲಿ ಎರೆಡೆರಡು ಶೌಚಾಲಯ ಇದೆ.

ಇತ್ತೀಚೆಗಷ್ಟೇ ಕಟ್ಟಡದ ಉದ್ಘಾಟನೆ ನೆರವೇರಿದ್ದು, ಎರಡು ಕಮೋಡ್‌ಗಳನ್ನು ಸ್ಥಾಪಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಟ್ಟಡದ ಯೋಜನಾಧಿಕಾರಿ ಸ್ಪಷ್ಟನೆ ನೀಡಿದ್ದು, ಇನ್ನೂ ಕಟ್ಟಡದ ಕಾಮಗಾರಿ ಪೂರ್ಣಗೊಂಡಿಲ್ಲ. ಎರಡೂ ಶೌಚದ ಮಧ್ಯೆ ಗೋಡೆ ಕಟ್ಟಬೇಕಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!