Wednesday, October 5, 2022

Latest Posts

ಹಿಮಾಚಲಪ್ರದೇಶದಲ್ಲಿ ಹಠಾತ್‌ ಪ್ರವಾಹ: ಕೊಚ್ಚಿಹೋಗಿದ್ದ ಇಬ್ಬರ ಮೃತದೇಹ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಮಾಚಲಪ್ರದೇಶದ ಕುಲುವಿನ ಸೋಲಾಂಗ್ ನಾಲಾದಲ್ಲಿ ನಿನ್ನೆ ಹಠಾತ್ ಪ್ರವಾಹಕ್ಕೆ ಇಬ್ಬರು ನಾಪತ್ತೆಯಾಗಿದ್ದಾರೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ಸ್ಥಗಿತಗೊಂಡಿದ್ದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಇಂದು ಬೆಳಗ್ಗೆ ಪುನರಾರಂಭವಾಗಿದೆ.

ಸ್ಥಳದಲ್ಲೇ ಒಂದು ಮೃತದೇಹ ಪತ್ತೆಯಾಗಿದ್ದು, ನಾಪತ್ತೆಯಾಗಿದ್ದ ಮತ್ತೊಬ್ಬ ವ್ಯಕ್ತಿಯ ಮೃತದೇಹ ಕೂಡ ನದಿಯಲ್ಲಿ ಸಿಕ್ಕಿದೆ. ಶೋಧಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್, ಪೊಲೀಸ್, ಅಗ್ನಿಶಾಮಕ ದಳ, ಆಡಳಿತ ತಂಡ ಮತ್ತು ಸ್ಥಳೀಯ ಸ್ವಯಂಸೇವಕರು ಸೇರಿದಂತೆ ಸುಮಾರು 100 ಜನರನ್ನು ನಿಯೋಜಿಸಲಾಗಿತ್ತು ಎಂದು ಮನಾಲಿ ಎಸ್‌ಡಿಎಂ ಸುರೇಂದರ್ ಠಾಕೂರ್ ಮಾಹಿತಿ ನೀಡಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!