ಧಾರವಾಡದ ಕಲ್ಲುಕ್ವಾರಿ ಬಳಿ ರೀಲ್ಸ್‌ ಮಾಡೋಕೆ ಹೊರಟ ಇಬ್ಬರು ವಿದ್ಯಾರ್ಥಿಗಳು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಫೋಟೊ ಹಾಗೂ ರೀಲ್ಸ್‌ ಮಾಡುವ ಹುಚ್ಚಿಗೆ ಇಬ್ಬರು ಬಾಲಕರು ಬಲಿಯಾಗಿದ್ದಾರೆ.

ಧಾರವಾಡದಲ್ಲಿ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ, ಸಾಮಾಜಿಕ ಜಾಲತಾಣಗಳಿಗೆ ರೀಲ್ಸ್‌ಗಳನ್ನು ಶೂಟ್ ಮಾಡುತ್ತಿದ್ದ ವೇಳೆ ನೀರು ತುಂಬಿದ್ದ ಕಲ್ಲು ಕ್ವಾರಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

ಮೃತರನ್ನು ಮಾಳಮಡ್ಡಿ ನಿವಾಸಿ ಶ್ರೇಯಸ್ ನವಲೆ (16) ಮತ್ತು ಸಪ್ತಾಪುರದ ದ್ರುವ ದಾಸರ್ (16) ಎಂದು ಗುರುತಿಸಲಾಗಿದೆ.

ಮನ್ಸೂರ್ ರಸ್ತೆಯಲ್ಲಿದ್ದ ಕಲ್ಲು ಕ್ವಾರಿಗೆ ಆರು ಜನರ ತಂಡ ಹೋಗಿತ್ತು. ಸ್ನೇಹಿತರ ಮನೆಗೆ ಭೇಟಿ ನೀಡುವುದಾಗಿ ಹುಡುಗರು ತಮ್ಮ ಪೋಷಕರಿಗೆ ಹೇಳಿದ್ದರು. ಶ್ರೇಯಸ್ ಮತ್ತು ದ್ರುವ ನೀರಿನೊಳಗೆ ಪೋಸ್ ನೀಡುತ್ತಿದ್ದರೆ, ಅವರ ಸ್ನೇಹಿತರು ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದರು. ಆದರೆ, ಇಬ್ಬರೂ ನೀರಿನೊಳಗಿನ ಹಳ್ಳದಲ್ಲಿ ಸಿಲುಕಿಕೊಂಡಿದ್ದಾರೆ. ಅವರಿಬ್ಬರು ಮುಳುಗುತ್ತಿರುವುದನ್ನು ಕಂಡು ಭಯಬಿದ್ದ ಸ್ನೇಹಿತರು ತಕ್ಷಣ ಪೊಲೀಸ್ ಠಾಣೆಗೆ ಧಾವಿಸಿ ಮಾಹಿತಿ ನೀಡಿದ್ದಾರೆ.

ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದ್ದು. ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!