Wednesday, June 29, 2022

Latest Posts

ವಿಷು ಸಂಭ್ರಮಾಚರಣೆ ಮಧ್ಯೆ ಸ್ನಾನಕ್ಕೆಂದು ತೆರಳಿದ ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು

ಹೊಸ ದಿಗಂತ ವರದಿ, ಕಾಸರಗೋಡು:

ವಿಷು ಸಂಭ್ರಮಾಚರಣೆ ಮಧ್ಯೆ ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿಗಳು ಹೊಳೆಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಕಾಸರಗೋಡು ಜಿಲ್ಲೆಯ ವೆಸ್ಟ್ ಎಳೇರಿ ಪಂಚಾಯತ್ ವ್ಯಾಪ್ತಿಯ ಕಾವುಂತಲ ನಿವಾಸಿಗಳಾದ ಶ್ರಕತ್ತಿಲ್ ರೆಜಿ – ಸೆಲಿನ್ ದಂಪತಿಯ ಪುತ್ರ ಅಲ್‌ಬಿನ್ ರೆಜಿ (15) ಮತ್ತು ಶ್ರಕತ್ತಿಲ್ ಥೋಮಸ್ – ಜೈನಿ ದಂಪತಿಯ ಪುತ್ರ ಬ್ಲಸನ್ ಥೋಮಸ್ (20) ಮೃತಪಟ್ಟ ದುರ್ದೈವಿಗಳು.
ಪರಪ್ಪಚ್ಚಾಲ್ ನದಿಯಲ್ಲಿ ಬುಧವಾರ ಮಧ್ಯಾಹ್ನ ಸ್ನಾನ ಮಾಡುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತು. ಇವರಿಬ್ಬರು ಸಹೋದರರ ಮಕ್ಕಳಾಗಿದ್ದಾರೆ. ಅಲ್‌ಬಿನ್ ರೆಜಿ ವರಕ್ಕಾಡ್ ಸೈಂಟ್ ಅಲೆಕ್ಸಿಯಾ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದು , ಬ್ಲಸನ್ ಥೋಮಸ್ ಮಂಗಳೂರು ಎಂ.ವಿ.ಶೆಟ್ಟಿ ನರ್ಸಿಂಗ್ ಕಾಲೇಜಿನ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಯಾಗಿದ್ದಾರೆ.
ವಿಷು ದಿನಾಚರಣೆಯ ಅಂಗವಾಗಿ ಈ ಇಬ್ಬರು ವಿದ್ಯಾರ್ಥಿಗಳು ಪರಪ್ಪಚ್ಚಾಲ್‌ನ ಸಹೋದರನ ಮನೆಗೆ ತೆರಳಿದ್ದರು. ಇವರಿಬ್ಬರೂ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿದ್ದು , ಈ ವೇಳೆ ಇದನ್ನು ನೋಡುತ್ತಿದ್ದ ಜೊತೆಗಿದ್ದ ಬಾಲಕ ಕೂಗುತ್ತಿರುವುದನ್ನು ಗಮನಿಸಿ ಓಡಿ ಬಂದ ನಾಗರಿಕರು ಕೂಡಲೇ ಅವರಿಬ್ಬರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ದಾರಿ ಮಧ್ಯೆ ಸಾವು ಸಂಭವಿಸಿತು. ಮೃತದೇಹಗಳನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಹಜರು ನಡೆಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss