ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಬಕ ವಿಟ್ಲ ರಸ್ತೆಯ ಕಂಬಳಬೆಟ್ಟುವಿನಲ್ಲಿ ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿಯಾಗಿ ಮೂವರು ಗಂಭೀರ ಗಾಯಗೊಂಡಿದ್ದಾರೆ.
ಉರಿಮಜಲು ಸಮೀಪ ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಕೇರಳ ಕೊಲ್ಲಂ ಮೂಲದ ದಿನೇಶ್, ಅಡ್ಯನಡ್ಕ ಮೂಲಕದ ಸತೀಶ್, ವಸಂತ್ ಗಾಯಗೊಂಡವರಾಗಿದ್ದಾರೆ.
ಕಂಬಳಬೆಟ್ಟು ದರ್ಗಾ ಬಳಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಗಾಯಾಳುಗಳನ್ನು ಪುತ್ತೂರು ಖಾಸಗೀ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರು ಗಂಭೀರ ಗಾಯಗೊಂಡಿದ್ದು, ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.