Wednesday, August 10, 2022

Latest Posts

ದ್ವಿಚಕ್ರ ವಾಹನ ಕಳ್ಳನ ಬಂಧನ: ಅಧಿಕಾರಿಗಳ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರ ಮೆಚ್ಚುಗೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆಮಾಸ್ಕ್ ಧರಿಸಿಸಾಮಾಜಿಕ ಅಂತರ ಕಾಯ್ದುಕೊಳ್ಳಿಕೈಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿನೀವೂ ಸುರಕ್ಷಿತರಾಗಿರಿನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಬಳ್ಳಾರಿ:

ಹೊಸಪೇಟೆ ‌ಪಟ್ಟಣ ಠಾಣೆಯ ಪಿಎಸ್ಐ ಕೆ.ಕುಮಾರ್ ಹಾಗೂ ಸಿಬ್ಬಂದಿಗಳು ನಾನಾ ಕಡೆ ಕಳ್ಳತನವಾಗಿರುವ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಗಳನ್ನು ‌ಬಂಧಿಸಿದ್ದಾರೆ.
ಹೊಸಪೇಟೆ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾದ ದ್ವಿಚಕ್ರ ವಾಹನಗಳನ್ನು ಶೋಧ‌ ನಡೆಸುವಾಗ, ಅನುಮಾನ್ಪದವಾಗಿ ಸಂಚರಿಸುತ್ತಿದ್ದ ವ್ಯಕ್ತಿಯೋಬ್ಬನನ್ನು ಹೊಸ ಪೇಟೆಯ ಕನಕದಾಸ ವೃತ್ತದ ಬಳಿ ವ್ಯಕ್ತಿಯನ್ನು ಹಿಡಿಯಲು ಮುಂದಾದಾಗ ವಾಹನ ನಿಲ್ಲಿಸದೇ ಪರಾರರಿಯಾಗಲು ಯತ್ನಿಸಿದ್ದರು. ಇದೇ ವ್ಯಕ್ತಿಯನ್ನು ಬಂಧಸಿ‌ ವಿಚಾರಣೆ ನಡೆಸಿದ ವೇಳೆ ಬೈಕ್ ಕಳ್ಳತನ ಮಾಡಿರುವುದು ಒಪ್ಪಿಕೊಂಡಿದ್ದಾನೆ. ನಾನಾ ಕಡೆ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ವೇಳೆ, ನಾನು ಸೇರಿದಂತೆ ಹೊಸಪೇಟೆ ತಾಲೂಕಿನ ಇನ್ನೋಬ್ಬ ವ್ಯಕ್ತಿ ಸೇರಿ 25ಕ್ಕೂ ಹೆಚ್ಚು ಬೈಕ್ ಗಳನ್ನು ಕದ್ದಿರುವ‌ ಬಗ್ಗೆ ಒಪ್ಪಿಕೊಂಡಿದ್ದಾನೆ. ಹೊಸಪೇಟೆ, ಬಳ್ಳಾರಿ, ಕಮಲಾಪೂರ್, ‌ಕೊಪ್ಪಳ, ಗಂಗಾವತಿ ‌ನಗರದಲ್ಲಿ‌ ಬೈಕ್ ಗಳನ್ನು ಕದ್ದಿರುವ ಕುರಿತು ಆರೋಪಿಗಳು‌ ಒಪ್ಪಿಕೊಂಡಿದ್ದಾರೆ. ಕರೂರು, ಆಂದ್ರಪ್ರದೇಶದ ಹೊಳಗುಂದ ಸೇರಿದಂತೆ ‌ನಾನಾ ಕಡೆ ಕಡಿಮೆ ಬೆಲೆಯಲ್ಲಿ ಬೈಕ್ ಗಳನ್ನು ಮಾರಾಟ ಮಾಡಲಾಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದು, ಇಲಾಖೆ ಅಧಿಕಾರಿಗಳು ಎಲ್ಲ ಬೈಕ್ ಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿರುವುದಕ್ಕೆ ಪೊಲೀಸ್ ಇಲಾಖೆ ಅಧೀಕ್ಷಕರು‌ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ನಗರ ಠಾಣೆಯಲ್ಲಿ ಬಂಧನವಾಗಿ ನ್ಯಾಯಾಂಗ ವಶದಲ್ಲಿದ್ದ ವ್ಯಕ್ತಿಯನ್ನು ವಶಕ್ಕೆ‌ ಪಡೆದು, ಹೆಚ್ಚಿನ ವಿಚರಣೆ ಕೈಗೊಂಡು ಮತ್ತಷ್ಟು ವಾಹನಗಳನ್ನು ಜಪ್ತಿ‌ ಮಾಡುವುದು ಬಾಕಿ ಇದೆ ಎಂದು ಎಸ್ಪಿ ಸೈದಲು ಅಡಾವತ್ ಅವರು ತಿಳಿಸಿದ್ದಾರೆ. ಈ ಕಾರ್ಯಾಚರಣೆ ಎಸ್ಪಿ ಸೈದಲು ಅಡಾವತ್, ಎಎಸ್ಪಿ ಲಾವಣ್ಯ, ಹೊಸಪೇಟೆ ನಗರ ಡಿಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಅವರ ‌ನೇತೃತ್ವದಲ್ಲಿ ನಡೆದಿದ್ದು, ಪಿಎಸ್ಐ ಬಿ.ಕುಮಾರ್, ಎಎಸ್ಐ ಕೋದಂಡಪಾಣಿ, ಸಿಬ್ಬಂದಿಗಳಾದ ಶ್ರೀರಾಮ್ ರೆಡ್ಡಿ, ಫಣಿರಾಜ್, ಶ್ರೀನಿವಾಸ್, ತಿಮ್ಮಪ್ಪ, ಅಡಿವೆಪ್ಪ, ಗಾಳೆಪ್ಪ, ಲಿಂಗರಾಜ್, ಮಲಕಾಜಪ್ಪ, ಲಿಂಗರಾಜ್, ಯಮನೂರು‌ ನಾಯಕ ಅವರು ಆರೋಪಿಯನ್ನು ಪತ್ತೆ ಹಚ್ಚಿ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಹೆಚ್ಚಿನ ಶ್ರಮವಹಿಸಿದ್ದಾರೆ, ಅಧಿಕಾರಿಗಳ ಕಾರ್ಯಕ್ಕೆ ಪೊಲೀಸ್ ಇಲಾಖೆ ಅಧೀಕ್ಷಕರು ಮೆಚ್ಚುಗೆ‌ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss