ದಿಗಂತ ವರದಿ ಕಾಸರಗೋಡು:
ಪೈವಳಿಕೆ ಬಾಯಾರು ಸಮೀಪದ ಅವಳ ಸಜಂಕಿಲದಲ್ಲಿ ಎರಡು ಕೋಣಗಳು ಕೆರೆಗೆ ಬಿದ್ದಿವೆ.
ಎರಡು ಕೋಣಗಳು ಕೆರೆಗೆ ಬಿದ್ದಿದ್ದು, ಒಂದು ಕೋಣ ಮೃತಪಟ್ಟಿದೆ. ಇನ್ನೊಂದು ಕೋಣವನ್ನು ರಕ್ಷಿಸಲಾಗಿದೆ.
ಕೋಣಗಳು ಕೆರೆಗೆ ಬಿದ್ದದ್ದನ್ನು ಸ್ಥಳೀಯರು ಗಮನಿಸಿದ್ದು, ಅವುಗಳನ್ನು ಮೇಲೆತ್ತಲು ನಡೆಸಿದ ಯತ್ನ ವಿಫಲವಾಯಿತು.
ನಂತರ ಉಪ್ಪಳದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಕಾಡುಕೋಣಗಳನ್ನು ಮೇಲಕ್ಕೆತ್ತಿದರು.
ಕೆರೆ ಸುತ್ತ ಪೊದೆಗಳು ಬೆಳೆದಿದ್ದು, ರಾತ್ರಿ ಆಕಸ್ಮಿಕವಾಗಿ ಕೋಣಗಳು ಕೆರೆಗೆ ಬಿದ್ದಿವೆ ಎನ್ನಲಾಗಿದೆ.