PRO KABADDI | ಹ್ಯಾಟ್ರಿಕ್‌ ಗೆಲುವಿನ ಮೂಲಕ ಮೂರನೇ ಸ್ಥಾನಕ್ಕೇರಿದ ಯು ಮುಂಬಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರೋ ಕಬಡ್ಡಿಯಲ್ಲಿ ಭರ್ಜರಿ ಲಯದಲ್ಲಿರುವ ಯು ಮುಂಬಾ ತಂಡ ತೆಲುಗು ಟೈಟಾನ್ ವಿರುದ್ಧ 40-37ರಿಂದ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ತಂಡದ ಸ್ಟಾರ್‌ ಆಟಗಾರ ಆಶಿಶ್ 1 ಟ್ಯಾಕಲ್ ಮತ್ತು 3 ಬೋನಸ್‌ನೊಂದಿಗೆ 8 ಅಂಕಗಳನ್ನು ಕಲೆಹಾಕಿ ತಂಡಕ್ಕೆ ಗೆಲವು ತಂದುಕೊಟ್ಟರು. ಸಹ ಆಟಗಾರ ಪ್ರಣಯ್ ವಿನಯ್ ರಾಣೆ ಅವರು 2 ಬೋನಸ್‌ನೊಂದಿಗೆ 4 ಅಂಕ ಕಲೆಹಾಕಿದರು.
ತೆಲುಗು ಟೈಟಾನ್ ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ತೋರಿತಾದರೂ ಕೇವಲ 3 ಅಂಕಗಳಿಂದ ಪಂದ್ಯವನ್ನು ಕಳೆದುಕೊಂಡಿತು. ಟೈಟಾನ್ಸ್‌ ಪರ ಸಿದ್ಧಾರ್ಥ್‌ ದೇಸಾಯಿ 18 ಅಂಕಗಳನ್ನು ಗಳಿಸಿ ಅತ್ಯುತ್ತಮ ಹೋರಾಟ ತೋರಿದರು.
ತಮಿಳು ತಲೈವಾಸ್ ಹಾಗೂ ಬೆಂಗಾಲ್ ವಾರಿಯರ್ಸ್ ದಿನದ ಎರಡನೇ ಪಂದ್ಯ 41-41 ರಲ್ಲಿ ಡ್ರಾ ಆಯಿತು. ಪಾಯಿಂಟ್ಸ್ ಪಟ್ಟಿಯಲ್ಲಿ ಬೆಂಗಳೂರು ತಂಡ 10 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 35 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಪುಣೇರಿ ಪಲ್ಟನ್ ಮತ್ತು ದಬಾಂಗ್ ಡೆಲ್ಲಿ ಕ್ರಮವಾಗಿ 32 ಮತ್ತು 29 ಅಂಕಗಳೊಂದಿಗೆ 2 ಮತ್ತು 3 ನೇ ಸ್ಥಾನದಲ್ಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!