ಹೌತಿ ಬಂಡುಕೋರರು ಹಾರಿಸಿದ ಎರಡು ಕ್ಷಿಪಣಿ ಹೊಡೆದುರುಳಿಸಿದ ಯುಎಇ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗಲ್ಫ್‌ ರಾಷ್ಟ್ರ ಅರಬ್‌ ಅನ್ನು ಗುರಿಯಾಗಿಸಿ ಯೆಮೆನ್‌ ನ ಹೂತಿ ಬಂಡುಕೋರರು ಹಾರಿಸಿದ ಎರಡು ಕ್ಷಿಪಣಿಗಳನ್ನು ಅರಬ್‌ ಎಮಿರೇಟ್ಸ್‌ (ಯುಎಇ) ಹೊಡೆದುರುಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಅರಬ್‌ ಎಮಿರೇಟ್ಸ್‌ ನ ರಕ್ಷಣಾ ಸಚಿವಾಲಯ, ಯೆಮೆನ್‌ ಹೌತಿ ಬಂಡುಕೋರರು ಹಾರಿಸಿದ ಎರಡು ಖಂಡಾಂತರ ಕ್ಷಿಪಣಿಯನ್ನು ನಾಶ ಮಾಡಲಾಗಿದ್ದು, ಈ ದಾಳಿಯಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ. ಧ್ವಂಸಗೊಂಡ ಕ್ಷಿಪಣಿಯ ಅವಶೇಷಗಳು ಅಬುಧಾಬಿ ಎಮಿರೇಟ್ಸ್‌ ನ ಪ್ರದೇಶಗಳಲ್ಲಿ ಬಿದ್ದಿವೆ ಎಂದು ತಿಳಿಸಿದೆ.
ಅಬುಧಾಬಿಯಲ್ಲಿ ಹೂತಿ ಬಂಡುಕೋರರು ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿ ಮೂವರು ಮೃತಪಟ್ಟಿದ್ದರು. ಈ ದಾಳಿಯ ಹೊಣೆ ಹೊತ್ತ ಒಂದು ವಾರದ ಅಂತರದಲ್ಲಿ ಮತ್ತೊಂದು ದಾಳಿ ನಡೆದಿದೆ.
ಆದರೆ ಅರಬ್‌ ಯಾವುದೇ ರೀತಿಯ ದಾಳಿಯನ್ನು ಎದುರಿಸಲು ಸಿದ್ಧವಾಗಿದ್ದು, ರಾಷ್ಟ್ರವನ್ನು ರಕ್ಷಿಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.
ಹೌತಿ ಎಂಬುದು ಯೆಮನ್ ದೇಶದ ಉತ್ತರ ಭಾಗದಲ್ಲಿರುವ ಬುಡಕಟ್ಟು. ಇವರು ಶಿಯಾ ಇಸ್ಲಾಂ ತೀವ್ರವಾದವನ್ನು ಪ್ರತಿನಿಧಿಸುವ ಶಸ್ತ್ರಸಜ್ಜಿತ ಬಂಡುಕೋರರು. ಸೌದಿ ಅರೇಬಿಯಾ ಮತ್ತು ಯುಎಇಗಳೊಂದಿಗೆ ಇವರಿಗೆ ತೀವ್ರ ರಾಜಕೀಯ ಭಿನ್ನಾಭಿಪ್ರಾಯವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!