spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಉಡುಪಿ| ಸರಣಿ ಕಳ್ಳತನ: ನಾಲ್ವರು ಆರೋಪಿಗಳ ಬಂಧನ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ವರದಿ ಉಡುಪಿ:

ಜಿಲ್ಲೆಯ ಕೋಟ ಮತ್ತು ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ನಡೆಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೆಣಸ ನಿವಾಸಿ ಗೋಪಾಲ (26), ಬ್ರಹ್ಮಾವರ ತಾಲೂಕು ಪಜೆಮಂಗೂರು ನಿವಾಸಿ ಅರುಣ (26), ಯಲಂಪಳ್ಳಿ ನಿವಾಸಿ ರವಿ ಕುಮಾರ್ (28) ಮತ್ತು ಸಾಸ್ತಾನ ಕೋಡಿ ರಸ್ತೆ ರಜಾಕ್ (41) ಬಂಧಿತ ಆರೋಪಿಗಳು.
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ನಂಚಾರು ಗ್ರಾಮದ ಕರಬರಬೆಟ್ಟು ಎಂಬಲ್ಲಿ ನೀಲಕಂಠ ಕರಬ ಅವರ ಹಳೆ ಮನೆಯ ಹಿಂಬದಿ ಬಾಗಿಲು ಒಡೆದು ಮನೆಯಲ್ಲಿರುವ ಹಿತ್ತಾಳೆಯ ಪೂಜಾ ಘಂಟೆ, ದೀಪಗಳು ಹಾಗೂ ಕೊಡಪಾನದಂತಹ ಪೂಜಾ ಸಾಮಗ್ರಿಗಳು, ಬೆಳ್ಳಿಯ ಮೂರ್ತಿಯ ಕವಚ ಹಾಗೂ 1 ಗ್ರಾಂ ಚಿನ್ನದ ಪದಕ ಹಾಗೂ ಕಬ್ಬಿಣದ ಗೃಹೋಪಯೋಗಿ ವಸ್ತುಗಳು ಕಳ್ಳತನವಾಗಿದ್ದವು. ಬ್ರಹ್ಮಾವರ ಠಾಣಾ ವ್ಯಾಪ್ತಿಯ ಹೆಣ್ಮುಂಜೆ ಗ್ರಾಮದ ಪ್ರಬಾಡಿ ಮೂಲ ಜಟ್ಟಿಗೆ ಮತ್ತು ಬ್ರಹ್ಮ ದೈವಸ್ಥಾನದ ಕಂಚಿನ ಘಂಟೆಗಳು ಮತ್ತು ತೂಕಳಕಗಳು ಕೂಡ ಕಳವಾಗಿದ್ದವು. ಈ ಬಗ್ಗೆ ಕೋಟ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಕ್ಷಿಪ ಕಾರ್ಯಚರಣೆ ನಡೆಸಿದ ಕೋಟ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಳವು ಮಾಡಿದ ದೇವಸ್ಥಾನದ ಘಂಟೆಗಳು, ದೀಪಗಳು ಹಾಗೂ ಇನ್ನಿತರ ಪೂಜಾ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ವೃತ್ತನಿರೀಕ್ಷಕ ಅನಂತ ಪದ್ಮನಾಭ, ಕೋಟ ಪಿಎಸ್ಐ ಸಂತೋಷ ಬಿ.ಪಿ., ಅಪರಾಧ ವಿಭಾಗದ ಪಿಎಸ್ಐ ಪುಷ್ಮಾ ಮತ್ತು ಪ್ರೋಬೆಷನರಿ ಪಿಎಸ್ಐ ಭರತೇಶ್, ಸಿಬ್ಬಂದಿ ಸುರೇಶ್ ಶೆಟ್ಟಿ, ರಾಜು, ಸುರೇಶ್, ರಾಮ ದೇವಾಡಿಗ, ಜಯರಾಮ, ಪ್ರಕಾಶ, ಕೃಷ್ಣ, ವಿಕ್ರಮ್ ಮತ್ತು ಮಂಜುನಾಥ ಭಾಗವಹಿಸಿದ್ದರು

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss