Friday, July 1, 2022

Latest Posts

ಯುಗಾದಿ ಮಾರುತೇಶ್ವರ ಜಾತ್ರೆ: ಮುಳ್ಳಿನ ಗಿಡದ ಮೇಲೆ ಹೊರಳಾಡಿದ ಮಕ್ಕಳು, ಯುವಕರು

ಹೊಸ ದಿಗಂತ ವರದಿ, ಕೊಪ್ಪಳ:

ಯುಗಾದಿ ಹಬ್ನದ ನಿಮಿತ್ಯವಾಗಿ ಮಾರುತೇಶ್ವರ ಜಾತ್ರೆಯ ಅಂಗವಾಗಿ ತಾಲೂಕಿನ ಬಿಕನಹಳ್ಳಿ ಗ್ರಾಮದಲ್ಲಿ ಯುವಕರು ಬಣ್ಣದೋಕಳಿಯಲ್ಲಿ ಮಿಂದೇದ್ದರೆ ಸಣ್ಣ ಸಣ್ಣ ಮಕ್ಕಳು ಮುಳ್ಳಿನ ಗಿಡದಲ್ಲಿ ಜಿಗಿದು ಕುಣಿದಾಡಿದರು.
ಪ್ರತಿ ವರ್ಷದಂತೆ ಯುಗಾದಿ ಪಾಡ್ಯದ ದಿನದಂದು ಉಚ್ಚಾಯ ಉತ್ಸವ ಜರುಗುತ್ತದೆ. ಆದರೆ ಬೆಳಿಗ್ಗೆ ಗ್ರಾಮ ದೇವತೆ ದುರ್ಗಾದೇವಿ ಮೂರ್ತಿಯು ಗ್ರಾಮದ ಮೆರವಣಿಗೆ ನಡೆದು ಮನೆ ಮನೆಗೆ ತೆರಳಿ ಉಡಿ ತುಂಬುವ ಕಾರ್ಯ ಕ್ರಮ ಜರುಗಿತು. ಆದರೆ ಪಾಡ್ಯದ ಮರುದಿನ ಬುಧವಾರ ಮದ್ಯಾಹ್ನ 1 ಗಂಟೆಗೆ ಗ್ರಾಮದ ಆಂಜನೆಯ ಪಲ್ಲಕ್ಕಿಯು ಗ್ರಾಮದ ಹೊರ ವಲಯದಲ್ಲಿ ಸಾಗಿ ಬ್ಯಾಟಿ ಗಿಡವನ್ನು ಅಂದರೆ ಮುಳ್ಳಿನ ಗಿಡವನ್ನು ಕಿತ್ತು ಮಕ್ಕಳ ಕೈಯಲ್ಲಿ ಹಿಡಿದುಕೊಳ್ಳಲು ನೀಡುತ್ತಾರೆ. ಆದರೆ ಮಕ್ಕಳ ಮೈ ಮೇಲೆ ನೀರು ಸುರಿಯುತ್ತಿದ್ದಂತೆ ಮಕ್ಕಳು ಮುಳ್ಳಿನ ಗಿಡವವನ್ನು ನೆಲಕ್ಕೆ ಇಟ್ಟು ಮುಳ್ಳಿನ ಮೆಲೆ ಬಿದ್ದು ಹೊರಳಾಡುವ ದೃಶ್ಯ ನೋಡುಗರ ರೋಮಾಂಚನ ಗೊಳಿಸುವಂತೆ ಮಾಡಿತು.
ಆದರೆ ಯುವಕರು ಹೋಳಿ ಹುಣ್ಣಿಮೆ ಬದಲಾಗಿ ಈ ಯುಗಾದಿಯಲ್ಲಿ ಯುವಕರು ಪರಸ್ಪರ ಒಬ್ಬರಿಗೋಬ್ಬರು ಬಣ್ಣ ಎರಚುತ್ತಾ ಬಣ್ಣದೋಕಳಿಯಲ್ಲಿ ಮಿಂದೆದ್ದರು. ನಂತರ ನೀರು ತುಂಬಿದ ಹೊಂಡದಲ್ಲಿ ಮಾರುತೇಶ್ವರ ಪೂಜಾರಿ ಹೊಂಡದಲ್ಲಿ ಮುಳಗಿ ನಿಂತ ಜನಕ್ಕೆ ನೀರು ಉಗ್ಗುತ್ತದ್ದಂತೆ ಸುತ್ತ ನಿಂತ ಯುವಕರು ಹೊಂಡದಲ್ಲಿ ಜಿಗೀದು ನೀರು ಓಕಳಿಯಾಟ ಆಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss