ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ಗಡಿಪಾರಿಗೆ ಬ್ರಿಟನ್ ಕೋರ್ಟ್ ಅನುಮತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಸ್ತ್ರಾಸ್ತ್ರ ವ್ಯವಹಾರಗಳಲ್ಲಿ ಆರೋಪಿಯಾಗಿರುವ ಸಂಜಯ್ ಭಂಡಾರಿಯನ್ನು ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಆರೋಪಗಳನ್ನು ಎದುರಿಸಲು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಯುಕೆ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಶಸ್ತ್ರಾಸ್ತ್ರ ವ್ಯವಹಾರಗಳಿಗೆ ಸಂಬಂಧಿಸಿದಂತೆ ವಿದೇಶಿ ಕಂಪನಿಗಳಿಂದ 400 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕಿಕ್ ಬ್ಯಾಕ್ ಅನ್ನು ಸಂಜಯ್ ಪಡೆದಿದ್ದಾರೆ ಎನ್ನಲಾಗಿದೆ. ದುಬೈನ ಹಲವಾರು ಸಂಸ್ಥೆಗಳಲ್ಲಿ ಮಾಡಿದ ವಹಿವಾಟಿನ ದಾಖಲೆಗಳಿಂದ ಇದು ಸ್ಪಷ್ಟವಾಗಿದೆ.

60 ವರ್ಷದ ಭಂಡಾರಿಯ ಹಸ್ತಾಂತರಕ್ಕಾಗಿ ಭಾರತೀಯ ಅಧಿಕಾರಿಗಳು ಎರಡು ಮನವಿಗಳನ್ನ ಮಾಡಿದರು. ಮೊದಲ ಮನವಿ ಮನಿ ಲಾಂಡರಿಂಗ್ ಸಂಬಂಧಿಸಿದೆ ಮತ್ತು ಎರಡನೆಯದು ತೆರಿಗೆ ವಂಚನೆಗೆ ಸಂಬಂಧಿಸಿ ಯುಕೆ ನ್ಯಾಯಾಲಯಕ್ಕೆ ಹಸ್ತಾಂತರಿಸುವಂತೆ ಮನವಿ ಮಾಡಿದ್ದರು.

ಇದೀಗ ಲಂಡನ್’ನ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಮೈಕೆಲ್ ಸ್ನೋ, ಸಂಜಯ್ ಭಂಡಾರಿಯನ್ನು ಗಡಿಪಾರು ಮಾಡಲು ಯಾವುದೇ ನಿರ್ಬಂಧಗಳಿಲ್ಲ ಎಂದು ತಿಳಿಸಿದೆ.

ಜೊತೆಗೆ ನ್ಯಾಯಾಲಯದ ಆದೇಶದ ಆಧಾರದ ಮೇಲೆ ಹಸ್ತಾಂತರಕ್ಕೆ ಆದೇಶಿಸಲು ಅಧಿಕಾರ ಹೊಂದಿರುವ ಯುಕೆ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೇವರ್ಮನ್ ಅವರಿಗೆ ಪ್ರಕರಣವನ್ನು ಕಳುಹಿಸಲು ನಿರ್ಧರಿಸಿದರು.

ಹಸ್ತಾಂತರವು ಪ್ರತಿವಾದಿಯ ಕನ್ವೆನ್ಷನ್ ಹಕ್ಕುಗಳಿಗೆ ಹೊಂದಿಕೆಯಾಗುತ್ತದೆ ಎಂದು ನನಗೆ ತೃಪ್ತಿಯಾಗಿರುವುದರಿಂದ, ಪ್ರತಿವಾದಿಯನ್ನ ಹಸ್ತಾಂತರಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರಕ್ಕಾಗಿ ನಾನು ಈ ಪ್ರಕರಣವನ್ನ ಸೆಕ್ರೆಟರಿ ಆಫ್ ಸ್ಟೇಟ್ (ಬ್ರೇವರ್ಮನ್)ಗೆ ಕಳುಹಿಸಬೇಕು ಎಂದು ನ್ಯಾಯಾಧೀಶ ಸ್ನೋ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!