ಹಣಕಾಸು ಸಚಿವ ರಿಷಿ ಸುನಕ್ ಯಾವುದೇ ತಪ್ಪು ಎಸಗಿಲ್ಲ: ಬ್ರಿಟನ್‌ ತನಿಖಾ ವರದಿಯಲ್ಲಿ ಕ್ಲೀನ್‌ ಚಿಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರ ತೆರಿಗೆ ಪಾವತಿ ವಿಚಾರ ಹಾಗೂ ತಾವು ಅಮೆರಿಕ ಖಾಯಂ ನಿವಾಸತ್ವದ ಗ್ರೀನ್ ಕಾರ್ಡ್ ಹೊಂದಿರುವ ವಿಚಾರದಲ್ಲಿ ಹಣಕಾಸು ಸಚಿವ ರಿಷಿ ಸುನಕ್ ಯಾವುದೇ ತಪ್ಪು ಮಾಡಿಲ್ಲ ಎಂದು ವರದಿ ನೀಡಿರುವ ಬ್ರಿಟನ್‌ ಸರ್ಕಾರದ ಸ್ವಾತಂತ್ರ್ಯ ಸಲಹೆಗಾರರ ಪ್ರಕರಣವನ್ನು ತಳ್ಳಿಹಾಕಿದ್ದಾರೆ.
ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿಯಾಗಿರುವ ರಿಷಿ ಸುನಾಕ್‌ ಅವರ ಪತ್ನಿ ಅಕ್ಷತಾ ಅವರು ಭಾರತೀಯ ಮೂಲಗಳಿಂದ ಪಡೆಯುತ್ತಿರುವ ಆದಾಯಗಳಿಗೆ ಇಂಗ್ಲೆಂಡ್‌ನಲ್ಲಿ ತೆರಿಗೆಯನ್ನು ಪಾವತಿಸಿಲ್ಲ ಎಂಬ ವಿಚಾರವು ವಿವಾದಗ್ರಸ್ತವಾಗಿತ್ತು. ಸುನಾಕ್‌ ಸಚಿವಾಲಯದ ನಡವಳಿಕೆಗಳನ್ನು ಉಲ್ಲಂಘಿಸಿದ್ದಾರೆಯೇ ಎಂಬುದರ ತನಿಖೆಗೆ ಸ್ವಾತಂತ್ರ್ಯ ಸಲಹೆಗಾರ ಲಾರ್ಡ್ ಕ್ರಿಸ್ಟೋಫರ್ ಗೈಡ್‌ ಅವರಿಗೆ ಸೂಚಿಸಲಾಗಿತ್ತು.
ʼಮಂತ್ರಿಗಳು ಪಾಲಿಸಬೇಕಾದ ನೀತಿ ಸಂಹಿತೆಯನ್ನು ಸುನಾಕ್‌ ಕಟ್ಟುನಿಟ್ಟಾಗಿ ಪಾಲಿಸಿದ್ದಾರೆʼ. ಅವರು ತಮ್ಮ ʼಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಶ್ರದ್ಧೆʼ ಹೊಂದಿದ್ದಾರೆ ಎಂದು ಗೈಡ್ ಅವರು ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
41 ವರ್ಷದ ಸುನಕ್ ಅವರು ಹಾಲಿ ಪ್ರಧಾನಿ ಬೋರಿಸ್ ಜಾನ್ಸನ್ ಉತ್ತರಾಧಿಕಾರಿಯೆಂದು ಪರಿಣಿತವಾಗುತ್ತಿದ್ದು ಮುಂದಿನ ದಿನಗಳಲ್ಲಿ ಬ್ರಿಟನ್‌ ಪ್ರಧಾನಿ ಹುದ್ದೆಗೇರುವ ಸಾಧ್ಯತೆಗಳು ನಿಚ್ಚಳವಾಗಿದೆ. ಆದರೆ ಕುಟುಂಬದ ಉದ್ಯಮಗಳು, ಪತ್ನಿಯ ತೆರಿಗೆ ಪಾವತಿ ವಿಚಾರಗಳನ್ನು ಮುಂದಿಟ್ಟುಕೊಂಡು ಅವರ ಇಮೇಜ್ ಹಾನಿಗೊಳಿಸುವ ಪ್ರಯತ್ನಗಳು ನಡೆದಿದ್ದವು. ಇದೆಲ್ಲದವುಗಳಿಂದ ಬೇಸತ್ತ ಸುನಾಕ್‌ ತಮ್ಮಿಂದ ಯಾವುದೇ ನಿಯಮಗಳ ಉಲ್ಲಂಘನೆಯಾಗಿದೆಯೇ ಎಂಬುದರ ಕುರಿತು ತನಿಖೆ ನಡೆಸುವಂತೆ ಪ್ರಧಾನಿ ಬೋರಿಸ್‌ ಜಾನ್ಸನ್‌ ಬಳಿ ಮನವಿ ಮಾಡಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!