ನಾನು ತಗೋಂಡಿರೋದು ಭಾರತದ ಲಸಿಕೆ, ಥ್ಯಾಂಕ್ಯೂ ಅಂದ್ರು ಬೊರಿಸ್ ಜಾನ್ಸನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎರಡು ದಿನಗಳ ಭಾರತದ ಪ್ರವಾಸದಲ್ಲಿರುವ ಬ್ರಿಟನ್ ಪ್ರಧಾನಿ ಬೋರಿಸ್‌ ಜಾನ್ಸನ್‌‌, ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆಗಳನ್ನು ನಡೆಸಿದರು. ಬಳಿಕ ಮಾತನಾಡಿದ ಯುಕೆ ಪ್ರಧಾನಿ, ಇಂದು ನಾವು ಅದ್ಭುತವಾದ ಚರ್ಚೆಗಳನ್ನು ನಡೆಸಿ, ನಮ್ಮ ಸಂಬಂಧವನ್ನು ಎಲ್ಲಾ ರೀತಿಯಲ್ಲಿ ಮತ್ತಷ್ಟು ಬಲಪಡಿಸಿದ್ದೇವೆ. ಭಾರತ ಮತ್ತು ಬ್ರಿಟನ್ ನಡುವಿನ ಪಾಲುದಾರಿಕೆ ನಮ್ಮ ಕಾಲದ ನಿರ್ಣಾಯಕ ಸ್ನೇಹವಾಗಿದೆ ಎಂದು ಬಣ್ಣಿಸಿದರು.

ಜೊತೆಗೆ ಕೊರೊನಾ ಸಂದರ್ಭದಲ್ಲಿ ಇಡೀ ಜಗತ್ತಿಗೆ, ಭಾರತ ಲಸಿಕೆ ಪೂರೈಕೆ ಮಾಡಿದೆ. ನಾನು ತೆಗೆದುಕೊಂಡಿದ್ದು ಕೂಡ ಭಾರತದ ಲಸಿಕೆ. ಇಂದು ನನ್ನ ಕೈಯಲ್ಲಿ ಕೂಡ COVID19 ಲಸಿಕೆ ಇದೆ. ಈ ಲಸಿಕೆ ನನ್ನನ್ನು ರಕ್ಷಣೆ ಮಾಡಿದೆ ಎಂದು ಭಾರತಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!