ಯುಕೆಎಸ್‌ಸಿಸಿ ಕರ್ಮಕಾಂಡ: ಮೂವರು ಸರ್ಕಾರಿ ಅಧಿಕಾರಿಗಳು ಎಸ್‌ಟಿಎಫ್ ಬಲೆಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉತ್ತರಾಖಂಡ ಯುಕೆಎಸ್‌ಸಿಸಿ ಹಗರಣಕ್ಕೆ ಸಂಬಂಧಿಸಿದಂತೆ ಮೂವರು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಉತ್ತರಾಖಂಡ ಎಸ್‌ಟಿಎಫ್ ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಆರ್‌ಬಿಎಸ್ ರಾವತ್ (ಮಾಜಿ ಅಧ್ಯಕ್ಷ), ಕಾರ್ಯದರ್ಶಿ ಮನೋಹರ್ ಕನ್ಯಾಲ್, ಪರೀಕ್ಷಾ ಮಾಜಿ ನಿಯಂತ್ರಕ ಆರ್‌ಎಸ್ ಪೋಖಾರಿಯಾ ಎಂದು ಗುರುತಿಸಲಾಗಿದ್ದು, 2016 ರಲ್ಲಿ ಉತ್ತರಾಖಂಡ ಅಧೀನ ಸೇವಾ ಆಯ್ಕೆ ಆಯೋಗ (ಯುಕೆಎಸ್‌ಸಿಸಿ) ನಡೆಸಿದ ವಿಪಿಡಿಒ ನೇಮಕಾತಿ ಪರೀಕ್ಷೆಯಲ್ಲಿ ಇವರು ಅಕ್ರಮ ನಡೆಸಿದ್ದು ಬಯಲಾಗುತ್ತಿದ್ದಂತೆ ಬಂಧಿಸಲಾಗಿದೆ.
ನೇಮಕಾತಿ ಪರೀಕ್ಷೆ ಪ್ರಕರಣದಲ್ಲಿ ಇದು ಇದುವರೆಗಿನ ಅತಿ ದೊಡ್ಡ ಕ್ರಮ ಎಂದು ಹೇಳಲಾಗುತ್ತಿದೆ. 2016 ರಿಂದ ತನಿಖೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರ ಮಧ್ಯಸ್ಥಿಕೆಯ ನಂತರ ವೇಗ ಪಡೆದುಕೊಂಡಿದೆ. ʼಒಬ್ಬನೇ ಒಬ್ಬ ತಪ್ಪಿತಸ್ಥರನ್ನು ಬಿಡುವುದಿಲ್ಲʼ ಎಂದು ಧಾಮಿ ಹೇಳಿದ್ದಾರೆ. ನಮ್ಮ ಪುತ್ರರು ಮತ್ತು ಪುತ್ರಿಯರ ಭವಿಷ್ಯದೊಂದಿಗೆ ಆಟವಾಡುವವರು ನೇಮಕಾತಿ ಹಗರಣದಲ್ಲಿ ಕಂಬಿ ಹಿಂದೆ ಬಿದ್ದಿದ್ದಾರೆ. ತನಿಖಾ ಸಂಸ್ಥೆಗಳು ತಮ್ಮ ಕೆಲಸವನ್ನು ಮಾಡುತ್ತಿವೆ. ಉತ್ತರಾಖಂಡದ ಯುವಕರ ಹಕ್ಕುಗಳನ್ನು ಕೊಂದ ತಪ್ಪಿತಸ್ಥರನ್ನು ನಾವು ಬಿಡುವುದಿಲ್ಲ. ಭವಿಷ್ಯದ ಎಲ್ಲಾ ನೇಮಕಾತಿ ಪರೀಕ್ಷೆಗಳು ಸ್ವಚ್ಛ ಮತ್ತು ಪಾರದರ್ಶಕವಾಗಿರುವುದನ್ನು ಸರ್ಕಾರ ಖಾತ್ರಿಪಡಿಸುತ್ತಿದೆ ಎಂದು ಸಿಎಂ ಧಾಮಿ ಹೇಳಿದ್ದಾರೆ.
ಪರೀಕ್ಷೆಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ನಂತರ ಆಯೋಗದ ಕಾರ್ಯದರ್ಶಿಯನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಆಪಾದಿತ ಅಕ್ರಮಗಳ ತನಿಖೆಗಾಗಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಅನ್ನು ಸಹ ರಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!