ರಷ್ಯಾದ ಮೇಲೆ ಮೊದಲ ಬಾರಿಗೆ ಏರ್ ಸ್ಟ್ರೈಕ್ ನಡೆಸಿದ ಉಕ್ರೇನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ರಷ್ಯಾ- ಉಕ್ರೇನ್ ನಡುವಿನ ಕದನ ಶುರುವಾಗಿ 37 ದಿನಗಳಾಗಿದ್ದು, ಇದೀಗ ಉಕ್ರೇನ್​ ಸೇನಾಪಡೆಗಳು ರಷ್ಯಾದ ಇಂಧನ ಶೇಖರಣಾ ಕೇಂದ್ರದ ಮೇಲೆ ವೈಮಾನಿಕ ದಾಳಿ ಮಾಡಿ ಧ್ವಂಸ ಮಾಡಿದೆ. ಇದು ರಷ್ಯಾದ ಮೇಲೆ ಉಕ್ರೇನ್​ ಮಾಡಿದ ಮೊದಲ ವೈಮಾನಿಕ ದಾಳಿಯಾಗಿದೆ.
ಈ ಹಿಂದೆ ಉಕ್ರೇನ್​ನ ಪ್ರದೇಶಗಳ ಮೇಲೆ ಸತತವಾಗಿ ದಾಳಿ ಮುಂದುವರಿಸಿರಷ್ಯಾ ಕ್ರೌರ್ಯ ಸೃಷ್ಟಿಸಿತ್ತು.
ಈ ಬಗ್ಗೆ ಆರೋಪಿಸಿರುವ ರಷ್ಯಾ, ಉಕ್ರೇನ್​ ಒಂದೆಡೆ ಸಂಧಾನ ನಡೆಸುವ ಮಾತುನಾಡುತ್ತೆ .ಇತ್ತ ತನ್ನ ಇಂಧನ ಶೇಖರಣಾ ಘಟಕದ ಮೇಲೆ ವೈಮಾನಿಕ ದಾಳಿ ಮಾಡಿ ಧ್ವಂಸ ಮಾಡಿದೆ. ಇದರಿಂದ ಘಟಕ ಭಾರಿ ಬೆಂಕಿಯಿಂದ ಹೊತ್ತಿ ಉರಿಯುತ್ತಿದೆ ಎಂದಿದೆ.
ಇಂದು ಬೆಳಗ್ಗೆ 6 ಗಂಟೆಗೆ ಎರಡು ಉಕ್ರೇನಿಯನ್ ಸೇನಾ ಹೆಲಿಕಾಪ್ಟರ್‌ಗಳು ನಡೆಸಿದ ವಾಯುದಾಳಿಯಿಂದಾಗಿ ಪೆಟ್ರೋಲ್ ಶೇಖರಣಾ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇಬ್ಬರು ಉದ್ಯೋಗಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಂಕಿಯನ್ನು ನಂದಿಸಲು 170 ಅಗ್ನಿಶಾಮಕ ಸಿಬ್ಬಂದಿ ಹೋರಾಡುತ್ತಿದ್ದಾರೆ ಎಂದು ಬೆಲ್ಗೊರೊಡ್ ಪ್ರದೇಶದ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್ ಟೆಲಿಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.
ಇಂಧನ ಸಂಸ್ಕರಣಾ ಘಟಕ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ವಿಡಿಯೋವನ್ನು ರಷ್ಯಾ ಸರ್ಕಾರ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ. ದಾಳಿಗೊಳಗಾದ ರಷ್ಯಾ ಪ್ರದೇಶವಾದ ಬೆಲ್ಗೊರೊಡ್ ಉಕ್ರೇನ್‌ನ ಗಡಿಯಿಂದ ಸುಮಾರು 40 ಕಿಲೋಮೀಟರ್, ಖಾರ್ಕಿವ್‌ನಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!