ಉಕ್ರೇನ್ ದಾಸ್ತಾನಿನಲ್ಲಿ ಸಿಲುಕಿಕೊಂಡಿದೆ 25 ಮಿಲಿಯನ್ ಟನ್ ಧಾನ್ಯ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಸಂಘರ್ಷದ ಕಾರಣದಿಂದ ಉಕ್ರೇನ್ ನ ದಾಸ್ತಾನು ಕೇಂದ್ರಗಳಲ್ಲಿ 25 ಮಿಲಿಯನ್ ಟನ್ ಪ್ರಮಾಣದ ಧಾನ್ಯ ಮತ್ತೆಲ್ಲಿಗೂ ಸಾಗಾಟವಾಗದಂತೆ ಸಿಲುಕಿಕೊಂಡಿದೆ, ಜಗತ್ತಿನ ಆಹಾರ ಕೊರತೆಗೆ ಇದುವೇ ಕಾರಣ ಎಂದು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಹೇಳಿದೆ.

ರಷ್ಯವು ನೌಕಾಬಲವನ್ನು ಉಪಯೋಗಿಸಿ ಸಮುದ್ರ ಮಾರ್ಗಗಳಲ್ಲಿ ತಡೆಯನ್ನುಂಟುಮಾಡಿರುವುದು ಹಾಗೂ ಯುದ್ಧದಿಂದಾಗಿ ಉಕ್ರೇನ್ ಮೂಲಭೂತ ಸೌಕರ್ಯಕ್ಕೆ ಗಂಭೀರವಾಗಿ ಘಾಸಿಯಾಗಿರುವುದು ಧಾನ್ಯಗಳು ಹಾಗೆಯೇ ಉಳಿದುಕೊಂಡಿರುವುದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಯುದ್ಧಕ್ಕೂ ಮೊದಲು ಉಕ್ರೇನ್ ಜಗತ್ತಿಗೆ ಗೋದಿ ರಫ್ಚು ಮಾಡುವ ಆರನೇ ದೊಡ್ಡ ರಾಷ್ಟ್ರ ಹಾಗೂ ಮೆಕ್ಕೆಜೋಳ ರಫ್ತಿನಲ್ಲಿ ನಾಲ್ಕನೇ ದೊಡ್ಡ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!