Tuesday, July 5, 2022

Latest Posts

ಕರ್ನಾಟಕ ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾಗಿ ಉಮೇಶ್ ಆಯ್ಕೆ

ಹೊಸದಿಗಂತ ವರದಿ,ಮಂಡ್ಯ:

ಕರ್ನಾಟಕ ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಹೊರವಲಯದಲ್ಲಿರುವ ಅಮರಾವತಿ ಹೋಟೆಲ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣರೆಡ್ಡಿ ಅವರು ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ಅವರಿಗೆ ಸಮಿತಿಯ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.
ಉಪಾಧ್ಯಕ್ಷರಾಗಿ ಮಹೇಂದ್ರಬಾಬು, ಟಿ.ರಾಜೀವ್ ಪ್ರಶಾಂತ್, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಶ್ರೀನಿವಾಸ, ಸಂಘಟನಾ ಕಾರ್ಯದರ್ಶಿಯಾಗಿ ನಿತೀನ್ ಕುಮಾರ್, ಖಜಾಂಚಿಯಾಗಿ ಜೆ.ಶರತ್, ಸದಸ್ಯರಾಗಿ, ಎಚ್.ಎಸ್. ರಾಜೇಶ್ವರಿ, ರಾಘವೇಂದ್ರ ಪ್ರಸಾದ್, ಅನಿಲ್, ಯೋಗೇಶ್, ಸಿದ್ದಲಿಂಗು, ಗುರುರಜ್ ಅವರು ಆಯ್ಕೆಯಾಗಿದ್ದಾರೆ.
ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ. ವಿಜಯ ಕುಮಾರ್ ಇತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss